ಮಂಗಳೂರು : ತನ್ನ ಅಭಿಮಾನಿಗಳನ್ನು ಹಾಸ್ಯದ ಮೂಲಕ ಬೈಯುತ್ತಲೇ ಇನ್ನಾಗ್ರಾಮ್ ನಲ್ಲಿ ಹವಾ ಎಬ್ಬಿಸಿದ್ದ ಹಿರಿಯ ನಾಟಕ ಕಲಾವಿದೆ, ಗಾಯಕಿ, ನಿರ್ದೇಶಕಿ ನಾಗೂರಿ ನಿವಾಸಿ ಆಶಾ ನಾಗೂರಿ ಯಾನೆ ಆಶಾ ಪಂಡಿತ್ ಇಂದು ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ .
ಇನ್ಸ್ಟಾ ಗ್ರಾಮ್ ನಲ್ಲಿ ಚಿತ್ರ ವಿಚಿತ್ರ ಬೈಗುಳದಿಂದ ಪ್ರಸಿದ್ಧಿ ಪಡೆದಿದ್ದ ಅವರು ಪಡೀಲ್ ಬಳಿ ಪುಟ್ಟ ಗೂಡಂಗಡಿ ಹೊಂದಿದ್ದರು. ನಿನ್ನೆ ರಾತ್ರಿ ವಾಂತಿ ಮಾಡಿದ್ದು ಇಂದು ನಸುಕಿನ ಜಾವ ಹೃದಯಾಘಾತಕ್ಕೆ ತುತ್ತಾಗಿ ಅಂಗಳದಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರು ಎಂದು ಕುಟುಂಬ ಮೂಲಗಳು ಹೇಳಿವೆ.

