ಮಂಗಳೂರು : ಜಲಬಿಂದುನಿಪಾತೇನ ಕ್ರಮಶಃ ಪೂರ್ಯತೇ ಘಟಃ ।
ಸ ಹೇತುಃ ಸರ್ವವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ॥”
ಹನಿ ಹನಿಯಾಗಿ ನೀರು ತುಂಬಿದಂತೆ, ಜ್ಞಾನವೂ ನಿಧಾನವಾಗಿ, ನಿರಂತರ ಅಭ್ಯಾಸದಿಂದಲೇ ಸಂಪೂರ್ಣವಾಗುತ್ತದೆ ಎಂಬ ಸಂದೇಶವನ್ನು ಈ ಸುಭಾಷಿತ ಸಾರುತ್ತದೆ.

ಅದೇ ಭಾವನೆಯನ್ನು ಒಳಗೊಂಡಿರುವ ಅಕ್ಷರಾಭ್ಯಾಸವು ಮಗುವಿನ ವಿದ್ಯಾಭ್ಯಾಸದ ಮೊದಲ ಹೆಜ್ಜೆಯಾಗಿದೆ. ಇಂದು ಬರೆಯುವ ಪ್ರತಿಯೊಂದು ಅಕ್ಷರವೂ ಒಂದು “ಜಲಬಿಂದು”ವಿನಂತೆ — ಅದು ನಿಧಾನವಾಗಿ ಜ್ಞಾನ, ಸಂಸ್ಕಾರ ಹಾಗೂ ಸದ್ಗುಣಗಳ ಘಟವನ್ನು ತುಂಬುತ್ತದೆ.
ಗುರುಗಳ ಆಶೀರ್ವಾದ ಮತ್ತು ಹಿರಿಯರ ಮಾರ್ಗದರ್ಶನದೊಂದಿಗೆ ಆರಂಭವಾಗುವ ಈ ಸಂಪ್ರದಾಯ, ಮಕ್ಕಳಲ್ಲಿ ವಿದ್ಯೆಯ ಮಹತ್ವ, ಶಿಸ್ತು ಮತ್ತು ನಿರಂತರ ಪ್ರಯತ್ನದ ಮೌಲ್ಯವನ್ನು ಬಿತ್ತುತ್ತದೆ.
ಇಂದಿನ ಈ ಸಣ್ಣ ಆರಂಭವು ಭವಿಷ್ಯದಲ್ಲಿ ಮಹಾಜ್ಞಾನವಾಗಿ ಅರಳಲಿ ಎಂಬ ಹಾರೈಕೆ .
ಪುಟಾಣಿ ಮಕ್ಕಳ ವಿದ್ಯಾಭ್ಯಾಸದ ಮೊದಲ ಹೆಜ್ಜೆಗೆ ಶುಭಾರಂಭ ಕಲ್ಪಿಸುವ ಅಕ್ಷರಾಭ್ಯಾಸ ಸಮಾರಂಭವು ಕೆನರಾ ಹೈ ಸ್ಕೂಲ್ ಅಸೋಸಿಯೇಷನ್ ಆಡಳಿತಕ್ಕೆ ಒಳಪಟ್ಟ ಕೆನರಾ ನಂದಗೋಕುಲದಲ್ಲಿ ಭಕ್ತಿಭಾವ ಮತ್ತು ಸಂಭ್ರಮದೊಂದಿಗೆ ನೆರವೇರಿತು.
.
“ಪುಟ್ಟ ಹೆಜ್ಜೆಗಳು ಇಂದು ಜ್ಞಾನದ ಹಾದಿಯತ್ತ ಸಾಗಿದವು; ಮಕ್ಕಳ ಮುಖದಲ್ಲಿದ್ದ ಸಂತಸದ ನಗು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.”
ಪರಂಪರೆ ಮತ್ತು ಆಧುನಿಕತೆಯ ನಡುವಿನ ಸಮನ್ವಯ ಹೊಂದಿದ ಶಿಕ್ಷಣ ಉಪಕ್ರಮವನ್ನು ಪೋಷಿಸುತ್ತಿರುವ ಕೇಂದ್ರವಾಗಿ ಕೆನರಾ ನಂದಗೋಕುಲ ಬೆಳೆಯುತ್ತಿದೆ. ಕಲಿಕೆಯ ಶಿಸ್ತು ಹಾಗೂ ಮೌಲ್ಯಯುತ ಜೀವನವನ್ನು ಸಮೃದ್ಧಗೊಳಿಸಲು ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ರೂಪಿಸಲು ಕೆನರಾ ನಂದಗೋಕುಲ ಬದ್ಧವಾಗಿದೆ.
ಕಾರ್ಯಕ್ರಮದ ನೇತೃತ್ವವನ್ನು ಕೆನರಾ ನಂದಗೋಕುಲದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಜ್ವಲ್ ಮಲ್ಯ ವಹಿಸಿದ್ದರು. ಪೋಷಕರು, ಕೆನರಾ ನಂದಗೋಕುಲ ಕೊಡಿಯಾಲ್ಬೈಲ್ ಹಾಗೂ ಅದರ ಶಾಖೆಯಾದ ಪದವಿನಂಗಡಿ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

