ಮಡಿಕೇರಿ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ತಮ್ಮ ಕುಟುಂಬದೊಂದಿಗೆ ಐದು ದಿನಗಳ ಖಾಸಗಿ ಪ್ರವಾಸಕ್ಕಾಗಿ ಮಡಿಕೇರಿಗೆ ಭೇಟಿ ನೀಡಿದ್ದಾರೆ.
ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತಮ್ಮ ಕುಟುಂಬದೊಂದಿಗೆ ಕೊಡೈಕೆನಾಲ್ಗೆ ಪ್ರಯಾಣ ಬೆಳೆಸಿದರು ಮತ್ತು ಅಲ್ಲಿ 5 ದಿನಗಳ ವಿಶ್ರಾಂತಿ ಪಡೆದು ನಂತರ ತಮ್ಮ ಆಪ್ತರ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಿರುವರೂರು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಸರಣಿ ಪ್ರವಾಸದ ನಂತರ ಅವರು ಚೆನ್ನೈಗೆ ಮರಳಿದರು.

ನಿನ್ನೆ, ಎಂ.ಕೆ. ಸ್ಟಾಲಿನ್ ಮತ್ತು ಅವರ ಕುಟುಂಬವು ಚೆನ್ನೈನಿಂದ ಮೈಸೂರಿಗೆ ಖಾಸಗಿ ವಿಮಾನದಲ್ಲಿ ಆಗಮಿಸಿ. ಮೈಸೂರು ವಿಮಾನ ನಿಲ್ದಾಣದಿಂದ ಐಷಾರಾಮಿ ಕಾರಿನಲ್ಲಿ ಕೊಡಗಿಗೆ ಪ್ರಯಾಣ ಬೆಳೆಸಿದರು, ಈ ಪ್ರವಾಸದಲ್ಲಿ ಎಂ.ಕೆ. ಸ್ಟಾಲಿನ್ ಅವರ ಪತ್ನಿ ದುರ್ಗಾ, ಪುತ್ರ ಉದಯನಿಧಿ ಸ್ಟಾಲಿನ್, ಅಳಿಯ ಶಬರೀಸನ್ ಮತ್ತು ಆಪ್ತ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 10 ಜನರು ಇದ್ದರು.
ರಾಜಕೀಯ ಗದ್ದಲಗಳಿಂದ ಮುಕ್ತವಾಗಿ, ಸುಂದರವಾದ ಕೊಡಗು ಬೆಟ್ಟಗಳಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಅವರು ಯೋಜಿಸಿದ್ದಾರೆ. ಐದು ದಿನಗಳ ಕೊಡಗಿನ ಯಾತ್ರೆಯನ್ನು ಮುಗಿಸಿ ಜೂನ್ 2 ರಂದು ಚೆನ್ನೈಗೆ ಮರಳುವ ನಿರೀಕ್ಷೆಯಿದೆ

.
