ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ಮಂಗಳೂರು, ದಕ್ಷಿಣ ಕನ್ನಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ಮತ್ತು ದ.ಕ.ಜಿ.ಪಂ.ಸ. ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮರಕಡ, ಕುಂಜತ್ತಬೈಲ್ ಇಲ್ಲಿ 2026-27 ನೇ ಸಾಲಿನ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಮತ್ತು ನೂತನವಾಗಿ ಆರಂಭಿಸಿದ ಎಲ್.ಕೆ.ಜಿ ತರಗತಿಯ ಉದ್ಘಾಟನಾ ಸಮಾರಂಭವು ಶಾಲಾ ಸಭಾಂಗಣದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟ್ಹಿನೋ ರವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಡಯಟ್ ಕಾಲೇಜಿನ ಉಪನ್ಯಾಸಕರಾದ ಪೀತಾಂಬರ್,ಕುಂಜತ್ತಬೈಲ್ ವಾರ್ಡ್ ನಿಕಟ ಪೂರ್ವ ಮ.ನ.ಪಾ ಸದಸ್ಯ ಶರತ್ ಕುಮಾರ್,ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಅನಿತಾ,ರೋಸ್ಲಿನ್,ನಾಗರಾಜ್, ದೀಪಿಕಾ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಸಂತೋಷ್ ಮತ್ತು ಸದಸ್ಯರು, ಸ್ತ್ರೀ ಜಾಗೃತಿ ಸಮಿತಿಯ ಅಧ್ಯಕ್ಷೆ ಸಂಸಾದ್,ರಂಗ ಸ್ವರೂಪ ತಂಡದ ಉಪಾಧ್ಯಕ್ಷ ಹುಸೈನ್ ರಿಯಾಝ್,ಸಾಮ್ರಾಟ್ ಕ್ರಿಕೆಟರ್ ಅಧ್ಯಕ್ಷ ನಾಸೀರ್,ಮಣಿಕಂಠ, ಮುಂತಾದವರು ಉಪಸ್ಥಿತರಿದ್ದರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು, ಶಾಲಾ ಶಿಕ್ಷಕಿರಾದ ಸರಿತಾ ವಂದಿಸಿದರು ಮರೀನಾ ಕಾರ್ಯಕ್ರಮ ನಿರೂಪಿಸಿದರು.


