ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂದು ಮಹತ್ವದ ದಿನ. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಭವ್ಯ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಡಾ. ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
13 ಸಚಿವರ ಸಂಪುಟ: ಮೊದಲ ಹಂತದಲ್ಲಿ ಇವರೆಲ್ಲರಿಗೆ ಸ್ಥಾನ
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಲ್ಲದೆ, ಮೊದಲ ಹಂತದಲ್ಲಿ 13 ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಚಿವ ಸಂಪುಟದಲ್ಲಿ ಈ ಕೆಳಗಿನವರು ಸ್ಥಾನ ಪಡೆದಿದ್ದಾರೆ.
- ಎಂ.ಬಿ. ಪಾಟೀಲ್ (ಲಿಂಗಾಯತ)
- ಕೆ.ಜೆ. ಜಾರ್ಜ್ (ಕ್ರಿಶ್ಚಿಯನ್)
- ಕೆ.ಎಚ್. ಮುನಿಯಪ್ಪ (ದಲಿತ)
- ಸತೀಶ್ ಜಾರಕಿಹೊಳಿ (ಎಸ್.ಟಿ)
- ರಾಮಲಿಂಗಾ ರೆಡ್ಡಿ (ರೆಡ್ಡಿ)
- ಕೃಷ್ಣ ಬೈರೇಗೌಡ (ಒಕ್ಕಲಿಗ)
- ಪ್ರಿಯಾಂಕ್ ಖರ್ಗೆ (ದಲಿತ)
- ಈಶ್ವರ್ ಖಂಡ್ರೆ (ಲಿಂಗಾಯತ)
- ಬೈರತಿ ಸುರೇಶ್ (ಕುರುಬ)
- ಶರಣ ಪ್ರಕಾಶ್ ಪಾಟೀಲ್ (ಲಿಂಗಾಯತ)
- ಯು.ಟಿ. ಖಾದರ್ (ಅಲ್ಪಸಂಖ್ಯಾತ)
- ಯತೀಂದ್ರ ಸಿದ್ದರಾಮಯ್ಯ (ಕುರುಬ)


