ಕಾಸರಗೋಡು : ಶತಮಾನಗಳ ಧಾರ್ಮಿಕ ಪರಂಪರೆಯುಳ್ಳ ಕಾಸರಗೋಡು ಸೀಮೆಯ ಇತಿಹಾಸ ಪ್ರಸಿದ್ಧವಾದ ಕಾರಣಿಕವುಳ್ಳ ಕೂಡ್ಲು ಮಾರಿಗುಡಿಯೆಂದು ಖ್ಯಾತಿ ಪಡೆದಿರುವ ಕಾಸರಗೋಡು ರಾಮದಾಸ ನಗರ ಪೆರ್ನಡ್ಕದ ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿಯ ವಾರ್ಷಿಕ ಮಹಾಸಭೆಯು ಮೇ 31 2026 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೆ.ಮೋಹನ ಕುಂಬಳೆ ವಹಿಸಿದ್ದರು . ದೇವಸ್ಥಾನದ ಆಡಳಿತ ಮುಕ್ತೇಸರ ಕೆ.ಲೀಲಾಧರ ಕೂಡ್ಲು, ಅರ್ಚಕ ಶ್ರೀಪತಿ ಅಡಿಗ ಕೂಡ್ಲು, ಉದಯ ಕುಮಾರ್ ಅಂಬಿಕಾ ರೋಡ್,ಕೆ. ಮನ್ಮಥ ಕೂಡ್ಲು, ಧಾರ್ಮಿಕ ಮುಂದಾಳು ಕೆ. ಜಗದೀಶ ಕೂಡ್ಲು,ಸಲಹೆ ಸೂಚನೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರೀ ಭಜನಾ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಧಾರ್ಮಿಕ, ಭಜನಾ ಸಂಕೀರ್ತನೋತ್ಸವದ ಮೂಲಕ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಭಜನಾ ಸಂಘದ 75 ನೇ ವಾರ್ಷಿಕೋತ್ಸವದ ಪ್ರಯುಕ್ತ ಧನ ಸಂಗ್ರಹದ ಕೂಪನ್ ನ್ನು ಅರ್ಚಕ ಶ್ರೀಪತಿ ಅಡಿಗ ಕೂಡ್ಲು ಬಿಡುಗಡೆಗೊಳಿಸಿದರು. ಕೋಶಾಧಿಕಾರಿ ಕೆ. ಮನ್ಮಥ ವಾರ್ಷಿಕ ಆಯವ್ಯಯ ಲೆಕ್ಕಪತ್ರಗಳನ್ನು ಮಂಡಿಸಿದರು.

ನೂತನವಾಗಿ ರೂಪೀಕರಣಗೊಂಡ ಶ್ರೀ ಚಾಮುಂಡೇಶ್ವರೀ ಬಡಾವಣೆ ಅಸೋಸಿಯೇಷನ್ ಇದರ ಎಲ್ಲಾ 35 ಮನೆಗಳ ಕುಟುಂಬ ಸದಸ್ಯರನ್ನು ದೇವಸ್ಥಾನದ ಮುಂದಿನ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಆಮಂತ್ರಿಸಿ, ಸ್ವಾಗತಿಸಲಾಯಿತು.
ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನ ಸೇವಾ ಸಮಿತಿಯ ನೂತನ ಅಧ್ಯಕ್ಷ, ಪಾತ್ರಿ ಕೆ.ಮೋಹನ ಕೂಡ್ಲು, ಉಪಾಧ್ಯಕ್ಷ,ಆಡಳಿತ ಮೋಕ್ತೇಸರ ಕೆ.ಲೀಲಾಧರ ಕೂಡ್ಲು, ಕಾರ್ಯದರ್ಶಿ ಪ್ರಕಾಶ ಕುಮಾರ್ ಮೂಡುಬಿದ್ರೆ, ಜೊತೆ ಕಾರ್ಯದರ್ಶಿ ಕೆ. ಉದಯಕುಮಾರ್ ಅಂಬಿಕಾರೋಡ್, ಕೋಶಾಧಿಕಾರಿ ಕೆ.ಮನ್ಮಥ ಕೂಡ್ಲು,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಯಶವಂತ ಅಂಬಿಕಾರೋಡ್, ಉದಯ ನಾಯ್ಕ್ , ಕೆ. ಜಗದೀಶ ಕೂಡ್ಲು, ಕೆ. ಮೂರ್ತಿ, ಪ್ರವೀಣ್ ಕುಮಾರ್, ಕೆ. ಜಗದೀಶ,ಸುಜಿತ್ ಕುಮಾರ್ ಹಳೆಮನೆ, ಕೆ. ನಿರಂಜನ ವಾಮಾoಜೂರು,ಕೃಷ್ಣಯ್ಯ ಸುಜನ್ ಕುಮಾರ್, ರಾಜೇಂದ್ರ ಕೆ., ರಾಜು, ಪ್ರೇಮ ಉಮೇಶ ರಾವ್,ದಯಾನಂದ ಕೆ., ಪಿ. ನಾರಾಯಣ ನಾಯ್ಕ್,ಹಾಗೂ ಶ್ರೀ ಚಾಮುಂಡೇಶ್ವರೀ ಬಡಾವಣೆ ಅಸೋಸಿಯೇಷನ್ ಸದಸ್ಯರಾದ ಚಂದ್ರಕಾಂತ ಕೂಡ್ಲು, ಶಾರದ, ವಿದ್ಯಾ, ಪ್ರಶಾಂತ ಕೆ.,ಸಂತೋಷ ಕುಮಾರ್, ಶಶಿಧರ, ರಮೇಶ, ವಿನೋದ್ ಕುಮಾರ್, ರಾಜೇಶ್, ಹರೀಶ್, ಅರುಣ್ ಕುಮಾರ್, ಚಂದ್ರಕಲಾ, ಶಿವಪ್ರಸಾದ ಮುಂತಾದವರನ್ನು ಆಯ್ಕೆ ಮಾಡಲಾಯಿತು . ಆಡಳಿತ ಮೊಕ್ತೇಸರ ಕೆ. ಲೀಲಾದರ ಕೂಡ್ಲು ಸ್ವಾಗತಿಸಿದರು. ಪಿ. ನಾರಾಯಣ ನಾಯ್ಕ್ ಧನ್ಯವಾದ ವಿತ್ತರು.
ಕೂಡ್ಲು ಶ್ರೀ ಚಾಮುಂಡೇಶ್ವರೀ ಕಾಲಭೈರವ ದೇವಸ್ಥಾನದ ಪುನರ್ ನಿರ್ಮಾಣವನ್ನು ಕೀರ್ತಿಶೇಷರಾದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕೆ.ವೆಂಕಟ್ರಮಣ ಕೂಡ್ಲು ಅಂಬಿಕಾರೋಡ್ ಇವರ ಮುಂದಾಳತ್ವದಲ್ಲಿ ಕಾರ್ಯ ನಿರ್ವಹಿಸಿದ್ದರು.

