ಕಾಸರಗೋಡು: ಹಲಸು ಹಾಗೂ ಮಾವು ಪ್ರಿಯರಿಗಾಗಿ ಸಪ್ತ ಭಾಷಾ ಸಂಗಮ ನೆಲ ಕಾಸರಗೋಡಿನಲ್ಲಿ ಜುಲೈ 4 ಮತ್ತು 5ರಂದು ದ್ವಿ ದಿನಗಳ ‘ಹಲಸು ಮತ್ತು ಮಾವು ಮೇಳ’ ಆಯೋಜಿಸಲಾಗಿದೆ.
ಕೋಟೆಕಣಿಯ ಜೀವಾಸ್ ಮಾನಸ ಆಡಿಟೋರಿಯಂ ನಡೆಯಲಿರುವ ಈ ಮೇಳದಲ್ಲಿ ಹಲಸು ಮತ್ತು ಮಾವಿನ ವಿವಿಧ ತಳಿಗಳ ಪ್ರದರ್ಶನ, ಮಾರಾಟ ಹಾಗೂ ಅವುಗಳಿಂದ ತಯಾರಿಸಲಾದ ವೈವಿಧ್ಯಮಯ ಆಹಾರ ಉತ್ಪನ್ನಗಳ ಪ್ರದರ್ಶನ ನಡೆಯಲಿದ್ದು ಇದು ಪ್ರಮುಖ ಆಕರ್ಷಣೆಯಾಗಲಿದೆ.
ಮೇಳದಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಜೊತೆಗೆ ಕೃಷಿಕರು, ಉದ್ಯಮಿಗಳು ಹಾಗೂ ಸಾರ್ವಜನಿಕರ ನಡುವೆ ವಿಚಾರ ವಿನಿಮಯ ಕಾರ್ಯಕ್ರಮಗಳೂ ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ 9447101195 ಹಾಗೂ 9388849933 ಸಂಪರ್ಕ ಸಂಖ್ಯೆಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಮೇಳವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

