ಪಂಜಾಬ್ನ ಹೋಶಿಯಾರ್ಪುರದಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ. ಬಾಲಕಿಯ ಮೇಲೆ ಪುರ್ಹಿರಾನ್ ಮೂಲದ ದೀಪಕ್ ಕುಮಾರ್ ಎಂಬಾತ ಅತ್ಯಾಚಾರ ಎಸಗಿದ್ದಾನೆ. ಮೇ 20 ರಂದು ಅತ್ಯಾಚಾರ ನಡೆದಿತ್ತು. ಇದಾದ ನಂತರ ದೀಪಕ್ ಪರಾರಿಯಾಗಿದ್ದಾನೆ.
ಹುಡುಗಿ ಮತ್ತು ಆರೋಪಿ ದೀಪಕ್ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಮುಂದೆ ಆನ್ಲೈನ್ನಲ್ಲಿ ಸ್ನೇಹವನ್ನು ಮುಂದುವರಿಯಿತು, ನಂತರ ಯುವಕ ಹುಡುಗಿಯ ಮನೆಯ ಹತ್ತಿರ ಬರಲು ಪ್ರಾರಂಭಿಸಿದನು. ಮೇ 20 ರಂದು ಆರೋಪಿಯು ಹುಡುಗಿಯ ಪೋಷಕರು ಕೆಲಸಕ್ಕೆ ಹೋಗಿದ್ದಾಗ ಹುಡುಗಿಯ ಮನೆಗೆ ಬಂದು ತನ್ನ ಬೈಕ್ನಲ್ಲಿ ಹುಡುಗಿಯನ್ನು ಕರೆದುಕೊಂಡು ಹೋಗಿದ್ದನು. ಯುವಕ ಅವಳನ್ನು ಕೈಗಾರಿಕಾ ಪ್ರದೇಶ ಫೋಕಲ್ ಪಾಯಿಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲಿ ಕಟ್ಟಡದಲ್ಲಿರುವ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆಂದು ಬಾಲಕಿ ಪೊಲೀಸರು ತಿಳಿಸಿದ್ದಾಳೆ.
ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೋಶಿಯಾರ್ಪುರ ಪೊಲೀಸರು ದೀಪಕ್ ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸ್) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

