ಹುಬ್ಬಳ್ಳಿ : ಅಮೇರಿಕೆಯ ವ್ಯೋಮಿಂಗ್ ನಗರದ ಜಾಗತಿಕ ಸಂಶೋಧನಾ ಪ್ರತಿಷ್ಠಾನವು ಉದ್ಯಮ ಕ್ಷೇತ್ರದಲ್ಲಿ ಮಾಡಿದ ಶ್ರೇಷ್ಠ ಸಾಧನೆಗಾಗಿ ಕೊಡಮಾಡುವ ರಾಷ್ಟ್ರೀಯ ಸಾಧನಾ ಪ್ರಶಸ್ತಿಗೆ ನಗರದ ಉದ್ಯಮಿ ಉಮೇಶ ವೀರಭದ್ರಯ್ಯ ಚಿಕ್ಕಮಠ ಭಾಜನರಾಗಿದ್ದಾರೆ.

ಕೇವಲ 10 ವರ್ಷದವರಿದ್ದಾಗಲೇ ಚಿಕ್ಕ ವ್ಯಾಪಾರದಲ್ಲಿ ತೊಡಗಿಕೊಂಡ ಉಮೇಶ ಚಿಕ್ಕಮಠ ಅವರು ಪ್ರಸ್ತುತ ಮಹಾಲಸಾ ಸಿಲ್ವರ್ ಶಾಪಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿ, ತಮ್ಮ ನಿರಂತರ ಕ್ರಿಯಾಶೀಲ ಕಠಿಣ ಪರಿಶ್ರಮ, ಜನಸ್ನೇಹಿ ಗ್ರಾಹಕ ಸೇವೆಗಳ ವಿಸ್ತರಣೆ ಹಾಗೂ ರಜತ ಕರಕುಶಲತೆಯ ವಿಭಿನ್ನ ವಸ್ತುಗಳ ಮಾರಾಟದ ಅವರ ಉದ್ಯಮ ಕ್ಷೇತ್ರದ ಸುದೀರ್ಘ ಪಯಣದ ಹಿರಿದಾದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಪ್ರದಾನ : ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಾಲಿವುಡ್ ಚಿತ್ರನಟಿ ಅಮಿಶಾ ಪಟೇಲ್ ಪ್ರಶಸ್ತಿ ಪ್ರದಾನ ಮಾಡಿದರು. ಅಮೇರಿಕೆಯ ವ್ಯೋಮಿಂಗ್ ನಗರದ ಜಾಗತಿಕ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಶ್ರೀಧರ ದಾವಸ್ಕರ್ ಸೇರಿದಂತೆ ಉದ್ಯಮ ಕ್ಷೇತ್ರದ ಗಣ್ಯರು ಇದ್ದರು.

