ಕಾಸರಗೋಡು : ರಾಮಕ್ಷತ್ರಿಯ ಸಮಾಜದ ಶಿವಾನಿ ಕಿರಣ್ ರಾವ್ ನ್ಯಾಷನಲ್ 20 ಕೆಜಿ ವಿಭಾಗದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗೋಲ್ಡ್ ಮೆಡಲ್ ಪಡೆದು ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಇವರು ಕೆ.ಡಿ.ಎಫ್. ಕರಾಟೆ ಅಂಡ್ ಫಿಟ್ನೆಸ್ ಅಕಾಡೆಮಿ, ಕುಂದಾಪುರ ಇದರ ವಿದ್ಯಾರ್ಥಿಯಾಗಿದ್ದಾರೆ. ಇವರೀಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಹೆಮ್ಮೆಯ ಗೌರವ ಅಭಿನಂದನೆಗಳು. ಶಿವಾನಿಯ ಅಪ್ರತಿಮ ಸಾಧನೆ ಉಳಿದವರಿಗೆ ಪ್ರೇರಣೆಯಾಗಲಿ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾಗಿರುವ ಡಾ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯಾಷನಲ್ ಸಬ್ -ಜೂನಿಯರ್ ಕರಾಟೆಯಲ್ಲಿ ಗೋಲ್ಡ್ ಮೆಡೆಲ್ ಪಡೆದ ಶಿವಾನಿಯವರಿಗೆ ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷರಾದ ಶ್ರೀ ಎಚ್.ಆರ್.ಶಶಿಧರ್ ನಾಯ್ಕ್, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಕಾಸರಗೋಡು ಜಿಲ್ಲಾಧ್ಯಕ್ಷ ಶ್ರೀ ಪ್ರದೀಪ್ ಬೇಕಲ್, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಅಧ್ಯಕ್ಷ ಶ್ರೀ ಶಿವರಾಮ ಕಾಸರಗೋಡು ಮುಂತಾದ ಅನೇಕ ಗಣ್ಯರು ಹೆಮ್ಮೆಯಿಂದ ಅಭಿನಂದನೆ ತಿಳಿಸಿದ್ದಾರೆ.

