ಮಂಗಳೂರು : ಪ್ರಕರಣವವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಪ್ಪಳ ಪಚ್ಚಿಲಾಂಬರ್ ನಿವಾಸಿ ಫಝಲ್ (31) ಬಂಧಿತ ಆರೋಪಿ.ಉಳ್ಳಾಲ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ- 76/21 ಕಲಂ 8(ಸಿ) 21(ಬಿ) NDPS Act ಪ್ರಕರಣದ ಆರೋಪಿಯಾಗಿದ್ದ ಫಜಲ್ 2021 ರಲ್ಲಿ ಜಾಮೀನನ ಮೇಲೆ ಹೊರಗಡೆ ಬಂದಿದ್ದು ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಮನೆಯಾದ ಉಪ್ಪಳದಿಂದ ದಸ್ತಗಿರಿ ಮಾಡಿ ಮಾನ್ಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ಮಂಗಳೂರು ಸ್ಪೆಷಲ್ ಕೇಸ್ ನಂಬರ್ 23/2026 ರಂತೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.


