ಮಾಣಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಪಲ್ಟಿಯಾದ ಪರಿಣಾಮ ಕಾರು ಚಾಲಕ ಮೃತಪಟ್ಟು ಅದರಲ್ಲಿದ್ದ ಸಹಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಜೂ.10ರಂದು ಮಧ್ಯಾಹ್ನ ನಡೆದಿದೆ.


ಹಾಸನ ಮೂಲದ ಲಕ್ಷ್ಮೀಕಾಂತ್ ಮೃತ ದುರ್ದೈವಿ ಚಾಲಕ ಎನ್ನಲಾಗಿದೆ. ರಂಜಿತ್, ದರ್ಶನ್, ಶೋಭಾ ಎಂಬುವವರು ಗಾಯಗೊಂಡಿದ್ದು ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



