ಮುಂಬೈ: 11.82 ಕೋಟಿ ರೂ. ಮೌಲ್ಯದ ಹೈಬ್ರಿಡ್ ಗಾಂಜಾದೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಮಲಯಾಳಂ ಮಾಡೆಲ್ ಒಬ್ಬರನ್ನು ಬಂಧಿಸಲಾಗಿದೆ.
ಮಿಸ್ ಕೇರಳ 2025 ರ ಸ್ಪರ್ಧಿ ಹರ್ಷ ಸನ್ನಿ (28) ಬಂಧನಕ್ಕೊಳಗಾದ ಆರೋಪಿ. ಹರ್ಷ ಸನ್ನಿ ಬುಧವಾರ ಮಧ್ಯರಾತ್ರಿ ಬ್ಯಾಂಕಾಕ್ನಿಂದ ಏರ್ ಇಂಡಿಯಾ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದರು. ಆಕೆಯ ನಡವಳಿಕೆಯ ಬಗ್ಗೆ ಸಂಶಯಗೊಂಡ ಏರ್ಪೋರ್ಟ್ ಗುಪ್ತಚರ ಘಟಕ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿಯಾಗಿ ಶೋಧ ನಡೆಸಿದರು.


ಆಕೆಯ ಬಳಿ 12 ಪ್ಲಾಸ್ಟಿಕ್ ಪ್ಯಾಕೆಟ್ಗಳಲ್ಲಿ 11 ಕಿಲೋಗ್ರಾಂಗಳಷ್ಟು ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದ್ದು, ಸ್ಥಳದಲ್ಲಿ ನಡೆಸಿದ ರಾಸಾಯನಿಕ ಪರೀಕ್ಷೆಯಲ್ಲಿ ಅದು ಹೈಬ್ರಿಡ್ ಗಾಂಜಾ ಎಂದು ತಿಳಿದುಬಂದಿದೆ, ಎನ್ಡಿಪಿಎಸ್ ಕಾಯ್ದೆಯಡಿ ನಿಷೇಧಿತ ವಸ್ತುಗಳನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಹರ್ಷ ಸನ್ನಿಯನ್ನು ಬಂಧಿಸಿದ್ದಾರೆ.



ವಿಚಾರಣೆಯ ಸಮಯದಲ್ಲಿ, ಹರ್ಷ ಸನ್ನಿ, ಅಪರಿಚಿತ ಪ್ರಯಾಣಿಕನೊಬ್ಬ ಮಾದಕ ದ್ರವ್ಯಗಳಿದ್ದ ಚೀಲವನ್ನು ತನಗೆ ನೀಡಿದ್ದಾಗಿ ಮತ್ತು ನಂತರ ಅವನು ನಾಪತ್ತೆಯಾಗಿದ್ದನೆಂದು ಹೇಳಿದ್ದಾರೆ, ಆದರೆ ಅಧಿಕಾರಿಗಳು ಇದನ್ನು ನಂಬಲಿಲ್ಲ ಎಂದು ವರದಿಗಳು ತಿಳಿಸಿವೆ. ಬಂಧಿತ ಹರ್ಷ ಸನ್ನಿಯನ್ನು ಫೋರ್ಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾದಕ ದ್ರವ್ಯಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ವಿವರವಾದ ತನಿಖೆ ನಡೆಯುತ್ತಿದ್ದಾರೆ. ಹರ್ಷ ಸನ್ನಿ ಮಿಸೆಸ್ ಕೇರಳ 2025ರಲ್ಲಿ ಸ್ಪರ್ಧಿಯಾಗಿದ್ದರು.


