ಧಾರವಾಡ : ಶ್ರೀರುದ್ರವು ಮನುಷ್ಯನನ್ನು ಭೋಗದಿಂದ ಯೋಗದ ಕಡೆಗೆ, ಅಹಂಕಾರದಿಂದ ಸಮರ್ಪಣೆಯ ಕಡೆಗೆ, ಬಂಧನದಿಂದ ಶಿವಸಾನ್ನಿಧ್ಯದ ಮೋಕ್ಷದ ಕಡೆಗೆ ನಡೆಸುವ ಮಹಾಮಂತ್ರಸಾಧನೆಯಾಗಿದ್ದು, ನಿತ್ಯ ರುದ್ರ ಪಠಣದಿಂದ ಬದುಕಿಗೆ ಪ್ರಸನ್ನತೆ ಪ್ರಾಪ್ತವಾಗುತ್ತದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಅವರು ಇಲ್ಲಿಯ ಮದಿಹಾಳದ ಶ್ರೀಸಿದ್ಧಾರೂಢ ಕಾಲೋನಿಯ ‘ಆರೂಢ ರುದ್ರಬಳಗ’ದ ಸಹೋದರಿಯರು ಅಧಿಕಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠಕ್ಕೆ ಆಗಮಿಸಿ ಶ್ರೀರುದ್ರ ಪಠಣ ಮಾಡಿ ಮಠದ ಮೂಲಪುರುಷರ ಕರ್ತೃ ಗದ್ದುಗೆಯ ಹಾಗೂ ಹಿರಿಯ ಶ್ರೀಗಳ ದರ್ಶನಾಶೀರ್ವಾದ ಪಡೆದ ಸಂದರ್ಭದಲ್ಲಿ ‘ಆರೂಢ ರುದ್ರಬಳಗ’ದ ಸಹೋದರಿಯರು ನೀಡಿದ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದರು.
ನಿತ್ಯವೂ ಶ್ರೀರುದ್ರದ ಪಠಣ ಮಾಡುವುದರಿಂದ ಕೇವಲ ಐಹಿಕ ಸುಖಗಳಷ್ಟೇ ಅಲ್ಲ, ಮನಶಾಂತಿ, ಚಿತ್ತಶುದ್ಧಿ, ಶಿವಭಕ್ತಿ, ಸರ್ವಜೀವ ಸಮದೃಷ್ಟಿ, ಧರ್ಮನಿಷ್ಠೆ ಮತ್ತು ಆತ್ಮಜ್ಞಾನಗಳಂತಹ ಉನ್ನತ ಫಲಗಳು ದೊರೆಯುತ್ತವೆ. ಶ್ರೀರುದ್ರ ಪಠಣದಿಂದ ಮಾನವನ ‘ನಾನು’ ಎಂಬ ಅಹಂಕಾರದ ನಿವಾರಣೆಯಾಗಿ ‘ಸರ್ವಸ್ವವೂ ನೀನೇ’ ಎಂಬ ಶಿವಭಾವ ಅಂಕುರಿಸುತ್ತದೆ ಎಂದೂ ಅವರು ಹೇಳಿದರು.
‘ಆರೂಢ ರುದ್ರಬಳಗ’ದ ಅಧ್ಯಕ್ಷೆ ಸರೋಜ ಶಿಗ್ಲಿ ಹಿರೇಮಠ, ಉಪಾಧ್ಯಕ್ಷೆ ಸುಜಾತಾ ಪೂಜಾರ, ಸದಸ್ಯರುಗಳಾದ ಕಮಲಾಕ್ಷಿ ಕಿತ್ತೂರ, ಸಾವಿತ್ರಿ ಬೆಳ್ಳಕ್ಕಿ, ಸವಿತಾ ತುರಮರಿ, ಜ್ಯೋತಿ ಹೂಗಾರ, ಮಂಜುಳಾ ಕಾಲವಾಡ, ರಶ್ಮಿ ಮುಂದಿನಮನಿ, ಸವಿತಾ ಕಡಕೋಳ, ಮಹಾದೇವಿ ಹೆಗಡೆ, ವಿದ್ಯಾ ಹೆಬ್ಬಳ್ಳಿ, ಗೀತಾ ಹುಬ್ಬಳ್ಳಿ, ಸುವರ್ಣ ಮಾದರಿಮಠ, ಗೀತಾ ವಗ್ಗಪ್ಪನವರ, ಸುವರ್ಣ ಹಣಬರಟ್ಟಿ, ಮಲ್ಲಮ್ಮ ಹೂಗಾರ, ರೇಖಾ ಪೂಜಾರ, ಸುವರ್ಣ ಕರೀಹಿಂಡಿ ಅವರನ್ನು ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವದಿಸಿದರು

PHOTO CAPTION :

