ಮುಂಬೈ: ಬೈಕುಲ್ಲಾ ಪೊಲೀಸರು ಮೊಹರಂ ಮೆರವಣಿಗೆಯ ಸಮಯದಲ್ಲಿ ವಿಷಕಾರಿ ಕ್ಯಾಪ್ಸುಲ್ಗಳನ್ನು ವಿತರಿಸುತ್ತಿದ್ದ ಶಂಕಿತನನ್ನು ಬಂಧಿಸಿದ್ದು, ಆತನಿಂದ 14,900 ವಿಷಪೂರಿತ ಕ್ಯಾಪ್ಸುಲ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಸಂಜೆ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ವಿಷಕಾರಿ ರಸಾಯನಿಕ ತುಂಬಿದ ಕ್ಯಾಪ್ಸುಲ್ಗಳನ್ನು ವಿತರಿಸಲು ಸಿದ್ಧತೆ ನಡೆಸುತ್ತಿದ್ದ ಆರೋಪಿ ಫಯಾಜ್ ಪ್ರೇಮ್ಜಿಯನ್ನು ಬಂಧಿಸಿ ಆತನಿಂದ 14,900 ಕ್ಯಾಪ್ಸುಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ ಆರೋಪಿಯು ಯಾವುದೇ ಅಧಿಕೃತ ಅನುಮತಿಯಿಲ್ಲದೆ ‘ನೋವು ನಿವಾರಕ’ ಕ್ಯಾಪ್ಸುಲ್ ಗಳ ಸೋಗಿನಲ್ಲಿ ಮೆರವಣಿಗೆಯಲ್ಲಿ ಕ್ಯಾಪ್ಸುಲ್ಗಳನ್ನು ವಿತರಿಸುತ್ತಿದ್ದ. ಅವನ ಚಲನವಲನಗಳು ಅನುಮಾನಾಸ್ಪದವಾಗಿ ಕಂಡುಬಂದ ಕಾರಣ, ಪೊಲೀಸರು ತಕ್ಷಣ ಅವನನ್ನು ಬಂಧಿಸಿದರು. ಆರಂಭಿಕ ತನಿಖೆಯಲ್ಲಿ ಈ ಕ್ಯಾಪ್ಸುಲ್ಗಳಲ್ಲಿ ವಿಷಕಾರಿ ಜಿಂಕ್ ಫಾಸ್ಫೈಡ್ ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಈ ಕ್ಯಾಪ್ಸುಲನ್ನು ಸೇವಿಸಿದ ಸಲ್ಮಾನ್ ಸೈಯದ್ ಎಂಬ ಯುವಕನ ಆರೋಗ್ಯ ಹದಗೆಟ್ಟಿದ್ದು, ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಆರೋಪಿಯಿಂದ 14,900 ಕ್ಯಾಪ್ಸುಲ್ಗಳನ್ನು ವಶಪಡಿಸಿಕೊಂಡಿದ್ದಾರೆ ತನಿಖೆಯ ಸಮಯದಲ್ಲಿ ಅವರು 30,000 ಖಾಲಿ ಕ್ಯಾಪ್ಸುಲ್ಗಳನ್ನು ಆರ್ಡರ್ ಮಾಡಿದ್ದರು ಮತ್ತು 50 ಕೆಜಿ ರಂಜಕವನ್ನು ಆರ್ಡರ್ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಬಿಬಿಎ ಪದವೀಧರನಾಗಿದ್ದು, ಪುಣೆಯಲ್ಲಿ ಪೇಂಟ್ ವ್ಯವಹಾರ ನಡೆಸುತ್ತಿದ್ದಾನೆ. ಈ ಹಿಂದೆ ಇರಾನ್ ಮತ್ತು ಇರಾಕ್ಗೆ ಭೇಟಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಆರೋಪಿಗೆ ಯಾವುದೇ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿದೆಯೇ ಮತ್ತು ದೊಡ್ಡ ದಾಳಿ ನಡೆಸಲು ಉದ್ದೇಶಿಸಿದ್ದಾನೆಯೇ ಎಂಬ ಬಗ್ಗೆ ಬೈಕುಲ್ಲಾ ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

