ಮಂಗಳೂರು : ಮಂಗಳೂರು ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಮಗುವಿಗೆ ಪೋಲಿಯೊ ಹನಿ ಹಾಕುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಪೋಲಿಯೊ ಮುಕ್ತ ಆಗಿದ್ದರೂ, ಅದನ್ನು ಮುಂದುವರಿಸಲು ಮಕ್ಕಳಿಗೆ ಲಸಿಕೆ ಹಾಕುವುದು ಅಗತ್ಯ. ಎಲ್ಲ ಪಾಲಕರು ವಿಶೇಷ ಕಾಳಜಿ ವಹಿಸಿ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಹೆಚ್ ಆರ್ ತಿಮ್ಮಯ್ಯ, ಲೇಡಿಗೋಷನ್ ಅಧೀಕ್ಷಕ ಡಾ ದುರ್ಗಾಪ್ರಸಾದ್, ಆಸ್ಪತ್ರೆಯ ಆರ್ ಎಂ ಒ ಡಾ ಜಗದೀಶ್, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ ರಾಜೇಶ್ ಮತ್ತಿತರರು ಇದ್ದರು.

