ಮಂಗಳೂರು : ಬಿಸಿನೆಸ್ ನೆಟ್ವರ್ಕ್ ಇಂಟರ್ನ್ಯಾಷನಲ್ (ಬಿಎನ್ಐ) ಇನ್ಸ್ಪಾಯರ್ ಚಾಪ್ಟರ್ ವತಿಯಿಂದ ‘ಇನ್ಸೈಟ್’ ಹೆಸರಿನ ವಿಶೇಷ ಬಿಸಿನೆಸ್ ನೆಟ್ವರ್ಕಿಂಗ್ ಕಾರ್ಯಕ್ರಮವು ಜುಲೈ 18ರಂದು ಸಂಜೆ 4.30ಕ್ಕೆ ನಗರದ ಅವತಾರ್ ಹೋಟೆಲ್ನಲ್ಲಿ ನಡೆಯಲಿದೆ ಎಂದು ಬಿಎನ್ಐ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್.ಶರ್ಮ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವು ಉದ್ಯಮಿಗಳು, ವೃತ್ತಿಪರರು ಹಾಗೂ ವ್ಯಾಪಾರ ನಾಯಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ, ಪರಸ್ಪರ ಸಂಪರ್ಕ, ಸಹಯೋಗ ಹಾಗೂ ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಉದ್ಯಮ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಷಯ ಮಂಡನೆ ಹಾಗೂ ಸಂವಾದ ನಡೆಸಲಿದ್ದಾರೆ. ಬಿಎನ್ಐ 2018ರಿಂದ ಮಂಗಳೂರು-ಉಡುಪಿ ಪ್ರದೇಶದಲ್ಲಿ ಉದ್ಯಮಿಗಳ ನೆಟ್ವರ್ಕ್ ವಿಸ್ತರಣೆಗೆ ಸೇವೆ ಸಲ್ಲಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎನ್ಐ ಅಧ್ಯಕ್ಷೆ ಸೌಜನ್ಯ ಹೆಗ್ಡೆ, ಇವೆಂಟ್ ಸಂಯೋಜಕರಾದ ಚೇತನ್ ಕಾಮತ್ ಹಾಗೂ ಪ್ರಿಯದರ್ಶಿನಿ ರೈ ಉಪಸ್ಥಿತರಿದ್ದರು.

