ಮಂಗಳೂರು : ಮಂಗಳೂರು ನಗರದ ಮೀನುಗಾರಿಕೆ ದಕ್ಕೆಯಲ್ಲಿ ನೀರಿಗೆ ಬಿದ್ದ ಮಹಿಳೆಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ಮೇಲೆತ್ತಿದ ಘಟನೆ ನಡೆದಿದೆ.
ಮೀನುಗಾರಿಕೆ ದಕ್ಕೆಯ 1ನೇ ಹಂತದ ಕೆಲಸಗಳು ನಡೆಯುತ್ತಿದ್ದು,
ಈ ಸಂದರ್ಭ ಮಹಿಳೆ ನೀರಿಗೆ ಬೀಳುತ್ತಿರುವುದನ್ನು ಸ್ಥಳೀಯ ಮೀನುಗಾರರು ಗಮನಿಸಿದ್ದಾರೆ. ಕೂಡಲೇ ಸಮುದ್ರಕ್ಕೆ ಇಳಿದು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಮೀನುಗಾರರು ಮಹಿಳೆಯನ್ನು ಸುರಕ್ಷಿತವಾಗಿ ಮೇಲ್ಬಾಗಕ್ಕೆ ತಂದಿದ್ದಾರೆ.

