ಮಂಗಳೂರು : ಖ್ಯಾತ ಬಹುಭಾಷಾ ನಟಿ, ವಿನ್ನಿ ಫರ್ನಾಂಡೀಸ್ ಯಾನೆ ವಿನ್ನಿ ಬಾಯಿ ಅವರ ಐದನೇ ಪುಣ್ಯತಿಥಿ ಕಾರ್ಯಕ್ರಮವು ಜುಲೈ 29 ರಂದು ಕುಲಶೇಖರ ಚರ್ಚ್ನಲ್ಲಿ IWIL Production ಸಂಸ್ಥೆಯ ವತಿಯಿಂದ ಅವರನ್ನು ಸ್ಮರಿಸಿ ಗೌರವವನ್ನು ಸಲ್ಲಿಸುತ್ತಿವೆ ಎಂದು ಅವರ ಪುತ್ರರಾದ ವಿಲ್ಫ್ರೆಡ್ ಫರ್ನಾಂಡೀಸ್ ಹೇಳಿದರು.

ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿನ್ನಿ ಫರ್ನಾಂಡಿಸ್ ಅವರು ಏಳು ಭಾಷೆಗಳ 90ಕ್ಕೂ ಹೆಚ್ಚು ನಿರ್ಮಾಣಗಳಲ್ಲಿ, ನಿರ್ವಹಣಾ ಹೊಣೆಗಾರಿಕೆ ವಹಿಸಿ ಅಭಿನಯಿಸಿದ್ದರು. ರಂಗಭೂಮಿ ದೂರದರ್ಶನ, ಚಲನಚಿತ್ರ, ಸಂಗೀತ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರು ಮಹತ್ವದ ಕೊಡುಗೆ ನೀಡಿದ್ದರು, ಬಹುಮುಖ ಪ್ರತಿಭೆ, ಹಾಸ್ಯಪ್ರಜ್ಞೆ ಮತ್ತು ಪ್ರೇಕ್ಷಕರೊಂದಿಗೆ ಆತ್ಮೀಯ ಸಂಪರ್ಕ ಸಾಧಿಸುವ ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾಗಿದ್ದ ಅವರಿಗೆ ‘ನವರಸ ಕಲಾವಿದೆ’, ‘ಕಾಮಿಡಿ ಕ್ಲೀನ್’, ‘ಕರಾವಳಿ ಮುತ್ತು’ ಮತ್ತು ‘ಅಭಿನಯ ಚತುರೆ’ ಸೇರಿದಂತೆ ಹಲವು ಗೌರವ ಬಿರುದುಗಳು ಲಭಿಸಿದ್ದವು.
ಅವರಿಗೆ ದೊರೆತ ಪ್ರಮುಖ ಗೌರವಗಳಲ್ಲಿ 2009 ರಲ್ಲಿ ಮಾಂಡ್ ಸೊಭಾಣ್ ನೀಡಿದ ‘ಅತ್ಯುತ್ತಮ ಕೊಂಕಣಿ ವ್ಯಕ್ತಿತ್ವ ಪ್ರಶಸ್ತಿ’ 2015-2016ರ ರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು 2017-2018ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಸೇರಿವೆ ಎಂದರು.
ಮನರಂಜನಾ ಕ್ಷೇತ್ರದಾಚೆಯೂ ವಿನ್ನಿ ಫರ್ನಾಂಡಿಸ್ ಅವರು ಲಯನ್ಸ್ ಕ್ಲಬ್ ಮೂಲಕ ಸಮುದಾಯ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲಿ., ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು. ಅವರು ಡಿಸ್ಟ್ರಿಕ್ಟ್ ಲಯನ್ಸ್ ಮ್ಯೂಸಿಕ್ ಅಕಾಡೆಮಿಯ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು, ತಮ್ಮ ಪ್ರತಿಭೆಯನ್ನು ಇತರರಿಗೆ ಪ್ರೇರಣೆ ನೀಡಲು ಮತ್ತು ಸಂತೋಷ ಹಂಚಲು ಬಳಸಿದ ದೃಢಸಂಕಲ್ಪದ ಕರುಣಾಮಯಿ ಹಾಗೂ ಸಕಾರಾತ್ಮಕ ಮನೋಭಾವದ ಮಹಿಳೆಯಾಗಿ ಅವರು ಸ್ಮರಣೀಯರಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ನಿರ್ಮಾಪಕ ಮತ್ತು ಚಲನಚಿತ್ರಕಾರ ವಿಲ್ಫ್ರೆಡ್ ಫರ್ನಾಂಡಿಸ್ ಅವರು, ಮೆಲ್ಬರ್ನ್ (ಆಸ್ಟ್ರೇಲಿಯಾ) ಮತ್ತು ಮುಂಬೈ (ಭಾರತ) ಕೇಂದ್ರಗಳಿಂದ ಕಾರ್ಯನಿರ್ವಹಿಸುವ IWIL Productions ಮೂಲಕ ತಾಯಿಯ ಸೃಜನಾತ್ಮಕ ಪಯಣವನ್ನು ಮುಂದುವರಿಸುತ್ತಿದ್ದಾರೆ
‘ನನ್ನ ತಾಯಿ ನನ್ನ ಅತ್ಯಂತ ದೊಡ್ಡ ಪ್ರೇರಣೆ ಮತ್ತು ಬೆಂಬಲವಾಗಿದ್ದರು. ಸೃಜನಶೀಲತೆಗೆ ಶಿಸ್ತು, ಧೈರ್ಯ ಮತ್ತು ಇತರರ ಸೇವೆ ಜೊತೆಯಾಗಬೇಕು ಎಂಬುದನ್ನು ಅವರು ನನಗೆ ಕಲಿಸಿದರು.ಅವರ ಕಲಾತ್ಮಕ ಚೇತನವನ್ನು ಮುಂದುವರಿಸುವುದಕ್ಕೂ ಅರ್ಹ ಪ್ರತಿಭೆಗಳಿಗೆ ಅವಕಾಶಗಳನ್ನು ಸೃಷ್ಟಿಸುವುದಕ್ಕೂ IWIL Productions ನನ್ನ ಮಾರ್ಗವಾಗಿದೆ,” ಎಂದು ವಿಲ್ಫ್ರೆಡ್ ಫರ್ನಾಂಡಿಸ್ ಹೇಳಿದರು,
IWIL Productions ಚಿಲನಚಿತ್ರಗಳು, ವೆಬ್ ಸರಣಿಗಳು, ಕಿರುಚಿತ್ರಗಳು, ಜಾಹೀರಾತುಗಳು ಹಾಗೂ ಅಂತರರಾಷ್ಟ್ರೀಯ ಮನರಂಜನಾ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಆಸ್ಟ್ರೇಲಿಯಾ ಮತ್ತು ಭಾರತದ ಚಿತ್ರೋದ್ಯಮಗಳ ಸೃಜನಾತ್ಮಕ ಸಂಪರ್ಕಗಳನ್ನು ಬಲಪಡಿಸುತ್ತಿದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ವಿಲ್ಸನ್ ಫೆರ್ನಾಂಡೀಸ್ ,ಧೀರಜ್, ಸೋನಿಯಾ ಹಾಗೂ ರೋನಕ್ ಉಪಸ್ಥಿತರಿದ್ದರು

