ಬೆಂಗಳೂರು : ಕರ್ನಾಟಕ ರಾಜಕೀಯದಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ಮುದ್ರೆ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಮಹತ್ವದ ಸಭೆಯ ಬಳಿಕ ಸಚಿವರು ಅಂತಿಮ ಪಟ್ಟಿ ರೆಡಿಯಾಗಿದೆ ಇಂದು ಸಂಜೆ 4.05ಕ್ಕೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ನವದೆಹಲಿದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಭಾಗವಹಿಸಿ ಸಚಿವರ ಅಂತಿಮ ಪಟ್ಟಿಗೆ ಅನುಮೋದನೆ ನೀಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ನಡೆಯುತ್ತಿದ್ದ ಸಚಿವ ಸ್ಥಾನಕ್ಕಾಗಿ ನಡೆದ ಲಾಬಿಗೆ ತೆರೆ ಬಿದ್ದಿದೆ.
ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ನಾಯಕರು
ಡ
ಲಕ್ಷ್ಮಣ ಸವದಿ (ಅಥಣಿ)
ಮಾಗಡಿ ಬಾಲಕೃಷ್ಣ (ಮಾಗಡಿ)
ವಿಜಯಾನಂದ ಕಾಶಪ್ಪನವರ್ (ಹುನಗುಂದ)
ಶಿವರಾಜ್ ತಂಗಡಗಿ ( ಕನಕಗಿರಿ)
ಎಸ್.ಎಸ್.ಮಲ್ಲಿಕಾರ್ಜುನ (ದಾವಣಗೆರೆ ಉತ್ತರ)
ಪುಟ್ಟರಂಗಶೆಟ್ಟಿ (ಚಾಮರಾಜನಗರ)
ಸಂತೋಷ್ ಲಾಡ್ (ಕಲಘಟಗಿ)
ಡಾ.ಅಜಯ್ ಸಿಂಗ್ (ಜೇವರ್ಗಿ)
ಗಾಯತ್ರಿ ಶಾಂತೇಗೌಡ (ಮೇಲ್ಮನೆ ಸದಸ್ಯೆ)
ರಿಜ್ವಾನ್ ಅರ್ಷದ್ (ಶಿವಾಜಿಇ)
ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ)
ರುದ್ರಪ್ಪ ಲಮ್ಹಾಣಿ
ಶಿವಲಿಂಗೇಗೌಡ (ಅರಸೀಕೆರೆ)
ಚೆಲುವರಾಯಸ್ವಾಮಿ (ನಾಗಮಂಗಲ)
ಬಸವರಾಜ ರಾಯರೆಡ್ಡಿ (ಯಲಬುರ್ಗಾ)
ಟಿ.ರಘುಮೂರ್ತಿ (ಚಳ್ಳಕೆರೆ)
ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ)
ಬಸವಂತಪ್ಪ (ಮಾಯಕೊಂಡ)
ಮಧು ಬಂಗಾರಪ್ಪ (ಸೊರಬ)

