ಮಂಗಳೂರು : 1997ರಲ್ಲಿ ಡಾ. ತುಂಬೆ ಮೊಯ್ದೀನ್ ಅವರಿಂದ ಸ್ಥಾಪನೆಯಾದ ತುಂಬೆ ಗ್ರೂಪ್ ಯುಎಇಯಲ್ಲಿ 30ನೇ ವರ್ಷಕ್ಕೆ ಕಾಲಿಟ್ಟಿದೆ. ಇದರ ಅಂಗವಾಗಿ ಅಜ್ಮಾನ್ನ ತುಂಬೆ ಹಿಲ್ಸ್ನಲ್ಲಿ ಡಾ.ತುಂಬೆ ಮೊಯ್ದೀನ್ ಅವರ ನೇತೃತ್ವದಲ್ಲಿ ಮಾಧ್ಯಮ ಸಂವಾದ ನಡೆಯಿತು.
ಈ ವೇಳೆ ಮಾತನಾಡಿದ ಅವರು, ಅಜ್ಮಾನ್ ಆಡಳಿತ ಕುಟುಂಬದ ಆಹ್ವಾನದ ಮೇರೆಗೆ 1998ರಲ್ಲಿ ಗಲ್ಫ್ ಮೆಡಿಕಲ್ ಕಾಲೇಜು ಆರಂಭಿಸಲಾಗಿತ್ತು. ಬಳಿಕ ಅದು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU)ಯಾಗಿ ಅಭಿವೃದ್ಧಿಗೊಂಡಿದೆ ಎಂದು ತಿಳಿಸಿದರು.
ತುಂಬೆ ಗ್ರೂಪ್ 15 ಕ್ಷೇತ್ರಗಳಲ್ಲಿ 26 ಬ್ರ್ಯಾಂಡ್ಗಳನ್ನು ಹೊಂದಿದ್ದು, 175 ರಾಷ್ಟ್ರಗಳ 1.9 ಕೋಟಿಗೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದೆ. GMUನಲ್ಲಿ 111ಕ್ಕೂ ಅಧಿಕ ದೇಶಗಳ ಸುಮಾರು 5,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಥೆಯು 70ಕ್ಕೂ ಅಧಿಕ ಅಂತರರಾಷ್ಟ್ರೀಯ ಶೈಕ್ಷಣಿಕ ಹಾಗೂ ಸಂಶೋಧನಾ ಸಹಭಾಗಿತ್ವಗಳನ್ನು ಹೊಂದಿದೆ.
ಸುಮಾರು 4,000 ಉದ್ಯೋಗಿಗಳನ್ನು ಹೊಂದಿರುವ ಗ್ರೂಪ್, ಸಂಶೋಧನೆ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮಗಳಿಗೂ ಆದ್ಯತೆ ನೀಡುತ್ತಿದೆ ಎಂದು ಡಾ.ತುಂಬೆ ಮೊಯ್ದೀನ್ ಹೇಳಿದರು.
ಈ ಸಂದರ್ಭದಲ್ಲಿ ತುಂಬೆ ಗ್ರೂಪ್ನ ಮುಖ್ಯ ಸಂವಹನ ಅಧಿಕಾರಿ ವಿಘ್ನೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

