ಮಂಗಳೂರು: IEEE CAS ಬೆಂಗಳೂರು ಚಾಪ್ಟರ್, IEEE ಬೆಂಗಳೂರು ಸೆಕ್ಷನ್ ಹಾಗೂ ಮಂಗಳೂರು ಸಬ್ಸೆಕ್ಷನ್ ಸಹಯೋಗದಲ್ಲಿ ‘Institute to Industry Forum 5.1 – Academia to Industry: Bridging the Gap’ ಕಾರ್ಯಕ್ರಮವನ್ನು ಆಗಸ್ಟ್ 29ರಂದು ಸಹ್ಯಾದ್ರಿ ಕಾಲೇಜು ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ನಲ್ಲಿ ಆಯೋಜಿಸಲಾಗಿದೆ.
ಸಹ್ಯಾದ್ರಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಆತಿಥ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರ ಮತ್ತು ಕೈಗಾರಿಕಾ ವಲಯದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಆಗಸ್ಟ್ 29ರಂದು ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಆಫ್ಲೈನ್ ಕಾರ್ಯಕ್ರಮ ನಡೆಯಲಿದ್ದು, ಆಗಸ್ಟ್ 31ರಿಂದ ಸೆಪ್ಟೆಂಬರ್ 4ರವರೆಗೆ ವರ್ಚುವಲ್ ಕಾರ್ಯಕ್ರಮಗಳು ನಡೆಯಲಿವೆ.
ಎಲೆಕ್ಟ್ರಾನಿಕ್ಸ್ ಸಂಬಂಧಿತ ವಿಭಾಗಗಳ 3ನೇ ಮತ್ತು 4ನೇ ವರ್ಷದ B.Tech./B.E. ಹಾಗೂ M.Tech./M.E. ವಿದ್ಯಾರ್ಥಿಗಳು ಭಾಗವಹಿಸಬಹುದು. IEEE CAS ಸದಸ್ಯರಿಗೆ ಪ್ರವೇಶ ಉಚಿತವಾಗಿದ್ದು, IEEE ಸದಸ್ಯರಿಗೆ ₹100 ಹಾಗೂ ಇತರರಿಗೆ ₹150 ಶುಲ್ಕ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ieee.cas.bangalore@gmail.com ಸಂಪರ್ಕಿಸಬಹುದು.


