ವಿಜಯನಗರಂ : ವಿಚಿತ್ರ ವೈದ್ಯಕೀಯ ಘಟನೆಯೊಂದರಲ್ಲಿ 33 ವರ್ಷದ ಮಹಿಳೆಯೊಬ್ಬಳ ಹೊಟ್ಟೆಯಿಂದ 14 ಪ್ಲಾಸ್ಟಿಕ್ ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್ ಪೇಟೆಯ ಪೆಟ್ಲೂರಿವಾರಿಪಾಲೆಂ ಗ್ರಾಮದ ಮಹಿಳೆಗೆ ತೀವ್ರ ಎದೆನೋವು ಮತ್ತು ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷೆ ನಡೆಸಿದ ವೇಳೆ ಆಕೆಯ ಜೀರ್ಣಾಂಗದಲ್ಲಿ ಹಲವು ಅಸಹಜ ವಸ್ತುಗಳು ಇರುವುದು ಎಕ್ಸ್ರೇ ಮತ್ತು ಅಲ್ಟ್ರಾಸೌಂಡ್ನಲ್ಲಿ ಪತ್ತೆಯಾಗಿತ್ತು.

ತಕ್ಷಣ ವೈದ್ಯರು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿ, 14 ಪೆನ್ನುಗಳು, 5 ಮರದ ಚಮಚಗಳು ಹಾಗೂ ಒಂದು ಮೇಣದಬತ್ತಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಹೊಟ್ಟೆಯಲ್ಲಿದ್ದ ಪೆನ್ನಿನ ಕ್ಯಾಪ್ ತೆರೆಯಲ್ಪಟ್ಟಿದ್ದರಿಂದ ಅದರ ಭಾಗ ಒಳಭಾಗಕ್ಕೆ ಚುಚ್ಚಿ ತೀವ್ರ ನೋವು ಉಂಟಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಆಕೆಗೆ ಮಾನಸಿಕ ಸಮಸ್ಯೆಗಳಿವೆ ಎಂದು ತಿಳಿದುಬಂದಿದೆ. ವೈದ್ಯರು ಆಕೆ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾರೆ. ಸಂತ್ರಸ್ತೆಯ ತಂದೆ ನೋಮುಲಾ ಹನುಮಂತ ರಾವ್, ಆಕೆ ಕಳೆದ10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು. ಆಕೆಯ ಪತಿ ಎರಡು ತಿಂಗಳ ಹಿಂದೆ ಆಕೆಗೆ ವಿಚ್ಛೇದನ ನೀಡಿದರು ಈ ಕಾರಣದಿಂದಾಗಿ.ಮಾನಸಿಕ ಒತ್ತಡ ಮತ್ತು ಖಿನ್ನತೆಯ ಸಂದರ್ಭದಲ್ಲಿ ಆಕೆ ಈ ವಸ್ತುಗಳನ್ನು ನುಂಗಿರಬಹುದು ಎಂದು ತಿಳಿಸಿದ್ದಾರೆ.
ಮಂಗಳೂರು ಮಿತ್ರ

