ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ನಿಷೇಧಿತ ಮೊಬೈಲ್ ಫೋನ್ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ದಿನಾಂಕ 8ರ ರಾತ್ರಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 82/2026, ಕಲಂ 323 ಬಿಎನ್ಎಸ್ ಹಾಗೂ ಕಲಂ 42 ಕರ್ನಾಟಕ ಕಾರಾಗೃಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ದಾಳಿ ನಡೆಸಿ ವಿವಿಧ ಕಡೆ ತಪಾಸಣೆ ನಡೆಸಿದಾಗ, ಎ-ಬ್ಲಾಕ್ನಲ್ಲಿದ್ದ ಕೈದಿಗಳ ಪೈಕಿ ಕೆಳಕಂಡವರು ಅಕ್ರಮವಾಗಿ 10 ಮೊಬೈಲ್ ಸ್ಮಾರ್ಟ್ಫೋನ್ ಗಳನ್ನು ಬಚ್ಚಿಟ್ಟುಕೊಂಡಿದ್ದನ್ನು ವಶಪಡಿಸಿಕೊಳ್ಳಲಾಗಿದೆ.
1)ರಿಫತ್ ಅಲಿ 2) ಇಬ್ರಾಹಿಂ ಖಲೀಲ್ 3) ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್ 4) ಅರ್ಷದ್ 5) ದಾವುದ್ ಫರ್ವೇಜ್ 6) ನಝರತ್ ಅಲಿ 7) ಶಿಫಾನ್ 8) ಅಬ್ದುಲ್ ಸಾದೀಕ್ 9) ಅರ್ಫಜ್
ಮೇಲ್ಕಂಡ ಕ್ರ.ಸಂ 1 ರಿಂದ 4 ನೇ ಖೈದಿಗಳು ಇತ್ತೀಚಿಗೆ ತೊಕ್ಕೊಟ್ಟು ಬಳಿ ನಡೆದ ಅರೀಫ್ ಕೊಲೆ ಪ್ರಕರಣದ ಆರೋಪಿಗಳಾಗಿರುತ್ತಾರೆ. ಕ್ರ.ಸಂ 5 ರಿಂದ 8 ರವರು ಎನ್.ಡಿ.ಪಿ.ಎಸ್ ಡ್ರಗ್ ಪೆಡ್ಲೇರ್ ಆರೋಪಿಗಳಾಗಿರುತ್ತಾರೆ. ಕ್ರ.ಸಂ 9 ನೇ ಕೈದಿಯು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾದ ಕೋಕಾ ಪ್ರಕರಣದ ಆರೋಪಿಯಾಗಿರುತ್ತಾನೆ.
ವಶಪಡಿಸಿಕೊಂಡಿರುವ ಮೊಬೈಲ್ ಫೋನ್ ಗಳನ್ನು ಅವುಗಳ ಬಳಕೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ.

