ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಬ್ರಾಂಡ್ನ 200 ಗ್ರಾಂ ಪನೀರ್ ಪ್ಯಾಕೆಟ್ಗಳಿಗೆ ಒಂದು ವರ್ಷದ ಶೆಲ್ಫ್ ಲೈಫ್ ಇದೆ ಎಂಬ ಮಾಹಿತಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಬಿಜೈಯಲ್ಲಿರುವ ಬ್ಲಿಂಕಿಟ್ ಆನ್ಲೈನ್ ಪ್ಲಾಟ್ಫಾರ್ಮ್ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಗೌರವಾನ್ವಿತ ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಅವರ ನಿರ್ದೇಶನದಂತೆ ನಡೆಸಿದ ಪರಿಶೀಲನೆಯಲ್ಲಿ, ಮಳಿಗೆಯ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ನಂದಿನಿ 200 ಗ್ರಾಂ ಪನೀರ್ ಪ್ಯಾಕೆಟ್ಗಳಿಗೆ ಒಂದು ತಿಂಗಳ ಶೆಲ್ಫ್ ಲೈಫ್ ಮಾತ್ರ ಇರುವುದಾಗಿ ಕಂಡುಬಂದಿದೆ.
ಪ್ಯಾಕೆಟ್ಗಳಲ್ಲಿ ತಯಾರಿಕಾ ದಿನಾಂಕವನ್ನು ಲೇಸರ್ ಪ್ರಿಂಟಿಂಗ್ ಮೂಲಕ ಚುಕ್ಕಿಗಳ ರೂಪದಲ್ಲಿ ನಮೂದಿಸಲಾಗಿದ್ದು, ಮುದ್ರಣದ ಸ್ವರೂಪದಿಂದಾಗಿ 2026ರ ಬದಲಿಗೆ 2025 ಎಂದು ತಪ್ಪಾಗಿ ಓದಿಕೊಳ್ಳುವ ಸಾಧ್ಯತೆ ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ವಾಸ್ತವಾಂಶವನ್ನು ಪರಿಶೀಲಿಸುವ ಉದ್ದೇಶದಿಂದ ಬಿಜೈ ಬ್ಲಿಂಕಿಟ್ ಮಳಿಗೆಗೆ ಭೇಟಿ ನೀಡಿ ಪ್ಯಾಕೆಟ್ಗಳು ಹಾಗೂ ಅವುಗಳ ಶೆಲ್ಫ್ ಲೈಫ್ ಕುರಿತು ಪರಿಶೀಲನೆ ನಡೆಸಲಾಗಿದೆ.

