ಧಾರವಾಡ : ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಏಳು ಕಂದಾಯ ಜಿಲ್ಲೆಗಳನ್ನು ಒಳಗೊಂಡಿರುವ ಬೆಳಗಾವಿ(ಕಿತ್ತೂರು ಕರ್ನಾಟಕ) ವಿಭಾಗ ಮಟ್ಟದ ಸರಕಾರಿ ನಿವೃತ್ತ ನೌಕರರ ಒಂದು ದಿನದ ಸಮಾವೇಶ ಸೆಪ್ಟಂ.28 ರಂದು(ಸೋಮವಾರ) ಮುಂಜಾನೆ 9 ಗಂಟೆಗೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಪು ಸಭಾಭವನದಲ್ಲಿ ಜರುಗಲಿದೆ.
ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಪಾಟೀಲನಲವಡಿ ಹಾಗೂ ಪ್ರಧಾನ ಕಾರ್ಯದರ್ಶಿ ಗುರು ತಿಗಡಿ ಅವರು, ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ ಸಮಾವೇಶ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹಾಗೂ ಎಐಪಿಟಿಎಫ್ ಅಧ್ಯಕ್ಷ ಬಸವರಾಜ ಗುರಿಕಾರ ಸಾಧಕರನ್ನು ಮತ್ತು ಹಿರಿಯ ಸದಸ್ಯರನ್ನು ಗೌರವಿಸಲಿದ್ದು, ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್. ಭೈರಪ್ಪ ಅಧ್ಯಕ್ಷತೆವಹಿಸುವರು.

ಸಂಸದ ಪ್ರೊ.ಎಂ.ನಾಗರಾಜ, ವಿಧಾನ ಪರಿಷತ್ ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರುಗಳಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ. ವಿನಯ ಕುಲಕರ್ಣಿ, ಎನ್.ಎಚ್.ಕೋನರೆಡ್ಡಿ, ಪ್ರದೀಪ ಶೆಟ್ಟರ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಎಫ್.ಎಚ್.ಜಕ್ಕಪ್ಪನವರ, ಶ್ರೀನಿವಾಸ ಮಾನೆ, ಲಿಂಗರಾಜ ಪಾಟೀಲ, ವಿವಿಧ ನೌಕರರ ಸಂಘಗಳ ಪದಾಧಿಕಾರಿಗಳಾದ ರಂಗೇಗೌಡ, ಎಸ್.ಎಂ. ಆನಂದಪ್ಪ, ಎಸ್.ಎಫ್.ಸಿದ್ಧನಗೌಡರ, ಬಿ.ಎಂ.ಸೂರಗೊ0ಡ, ಎಸ್.ಬಿ.ಸಿದ್ನಾಳ, ಎಸ್.ಜಿ.ಬಿರಾದಾರ, ಎಸ್.ಬಿ.ಅಣ್ಣಿಗೇರಿ, ವ್ಹಿ.ಎಂ. ಹೆಗಡೆ, ಕೆ.ಎಚ್.ಬೇಲೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಚಿಂತನ ಗೋಷ್ಠಿ : ‘ಹಸನಾದ ಬದುಕು ಸುಖವಾದ ಸಾವು’ ಎಂಬ ವಿಷಯವಾಗಿ ಸಾಹಿತಿ ವೆಂಕಟೇಶ ಮಾಚಕನೂರ ಅಧ್ಯಕ್ಷತೆಯಲ್ಲಿ ನಡೆಯುವ ಚಿಂತನಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಉಪನ್ಯಾಸ ನೀಡುವರು. ಕವಿವ ಸಂಘದ ಪ್ರ.ಕಾರ್ಯದರ್ಶಿ ಶಂಕರ ಹಲಗತ್ತಿ ಗೋಷ್ಠಿಗೆ ಚಾಲನೆ ನೀಡುವರು. ನಿವೃತ್ತ ಅಧಿಕಾರಿಗಳಾದ ಶಿವಶಂಕರ ಹಿರೇಮಠ, ಆರ್.ಸಿ.ಹಲಗತ್ತಿ, ಎಸ್.ಬಿ.ಕೊಡ್ಲಿ, ಆರ್.ಎಸ್.ಮುಳ್ಳೂರ, ಪಿ.ರಮೇಶ್ಯಾ, ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಹವ್ಯಾಸಿ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ನಂದೀಶ ಕಾಖಂಡಕಿ, ರಾಜಶೇಖರ ಹೊನ್ನಪ್ಪನವರ, ವ್ಹಿ.ಎಫ್.ಚುಳಕಿ, ನಾರಾಯಣ ಭಜಂತ್ರಿ, ಡಾ.ಪಿ.ಎಸ್.ಲಗಮಣ್ಣವರ, ಎಚ್.ಎಸ್.ಬಡಿಗೇರ, ಗುರು ಪೋಳ, ಎಸ್.ಜಿ.ಬಿಸೇರೊಟ್ಟಿ, ಬಿ.ಎ.ಪಾಟೀಲ ಮತ್ತು ಶಾರದಮ್ಮ ಅತಿಥಿಗಳಾಗಿ ಭಾಗವಹಿಸುವರು.
ನಿವೃತ್ತ ನೌಕರರ ಸೇವಾ ಸೌಲಭ್ಯಗಳು ಹಾಗೂ ಬೇಡಿಕೆಗಳ ಕುರಿತು ನಡೆಯುವ ಚಿಂತನ-ಮ0ಥನಕ್ಕೆ ಪ್ರಭಾರಿ ಡಿಡಿಪಿಐ ಉಮೇಶ ಬಮ್ಮಕ್ಕನವರ ಚಾಲನೆ ನೀಡುವರು. ವಿವಿಧ ಜಿಲ್ಲೆಗಳ ಪದಾಧಿಕಾರಿಗಳಾದ ವ್ಹಿ.ಬಿ.ಮುತ್ತೂರ, ಎಸ್.ಜಿ.ಚಿಕ್ಕೂರಮಠ, ಎಂ.ಎಸ್.ಮುದಕವಿ, ಎ.ಕೆ.ತಿಮ್ಮಾಪೂರ, ರೇಣುಕಾ ಹುಣಸಿಗಿಡದ, ಅನೀಲ ನಾಯ್ಕ, ಎಂ.ಸಿ.ವಗ್ಗೆ, ವಿಜಯರಾವ್ ಕುಲಕರ್ಣಿ, ಪ್ರಭಾ, ಕಾಂತಿಮತಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ನಿವೃತ್ತ ನೌಕರರ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಾಡುವ ಜೊತೆಗೆ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಈ ಸಮಾವೇಶ ಸಂಘಟಿಸಲಾಗಿದೆ. ವಿಜಯಪುರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಸುಮಾರು ಸಾವಿರಕ್ಕೂ ಅಧಿಕ ನಿವೃತ್ತ ನೌಕರರು ಸಮಾವೇಶದಲ್ಲಿ ಪಾಲ್ಗೊಳ್ಳುವರೆಂದೂ ಎಸ್.ಬಿ.ಪಾಟೀಲ ಮತ್ತು ಗುರು ತಿಗಡಿ ಹೇಳಿದರು. ನಿವೃತ್ತ ನೌಕರರ ಸಂಘದ ಎ.ಬಿ.ಚೆನ್ನವೀರಗೌಡ್ರ, ಬಿ.ಎಂ.ಸೂರಗೊ0ಡ, ವೈ.ಆರ್. ರಾಯನಗೌಡ್ರ, ವೈ.ಎಚ್.ಬಣವಿ, ಎಸ್.ಎಂ.ದಾನಪ್ಪಗೌಡ್ರ, ಎಚ್.ಎಸ್.ಬಡಿಗೇರ, ಎಂ.ಜಿ.ಸುಬೇದಾರ, ಗುರುಮೂರ್ತಿ ಯರಗಂಬಳಿಮಠ ಸುದ್ದಿಗೋಷ್ಠಿಯಲ್ಲಿದ್ದರು.
ಮಂಗಳೂರು ಮಿತ್ರ

