ದುಬೈ: ಯಕ್ಷ ಮಿತ್ರರು ದುಬೈ ಯುಎಇ ಸಂಸ್ಥೆಯ 23ನೇ ವರ್ಷದ ‘ಯಕ್ಷ ಸಂಭ್ರಮ–2026’ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸೆಪ್ಟೆಂಬರ್ 27ರಂದು ಜುಮೈರಾದ ಎಮಿರೇಟ್ಸ್ ಥಿಯೇಟರ್ನಲ್ಲಿ ಮಧ್ಯಾಹ್ನ 1.30ಕ್ಕೆ ‘ಶ್ರೀ ಕೃಷ್ಣ ಲೀಲೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಯಕ್ಷ ಮಿತ್ರರು ತಂಡದ ಸದಸ್ಯರು ಹಾಗೂ ತವರೂರಿನ ಪ್ರಸಿದ್ಧ ಯಕ್ಷಗಾನ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಭಾಗವತ ಸತೀಶ್ ಶೆಟ್ಟಿ ಬೊಂದೆಲ್ ಅವರ ಭಾಗವತಿಕೆಯಲ್ಲಿ ಕಾರ್ಯಕ್ರಮ ಮೂಡಿಬರಲಿದ್ದು, ಚೆಂಡೆ–ಮದ್ದಳೆ ವಾದನವನ್ನು ಸುಬ್ರಹ್ಮಣ್ಯ ಭಟ್ ದೇಲಂತಮಜಲು ಹಾಗೂ ಹಿರಣ್ಣಯ್ಯ ಆಚಾರ್ಯ ನಿರ್ವಹಿಸಲಿದ್ದಾರೆ.
ವೇಷಭೂಷಣದ ಜವಾಬ್ದಾರಿಯನ್ನು ಜಯಂತ್ ಪೈವಳಿಕೆ ಮತ್ತು ಪ್ರಸಾದ್ ಕಾಯರ್ ಕಟ್ಟೆ ವಹಿಸಲಿದ್ದಾರೆ. ಇವರೊಂದಿಗೆ ಯಕ್ಷ ಮಿತ್ರರು ತಂಡದ ಹವ್ಯಾಸಿ ಕಲಾವಿದರು ‘ಶ್ರೀ ಕೃಷ್ಣ ಲೀಲೆ’ ಯಕ್ಷಗಾನವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ವಿದೇಶದಲ್ಲಿರುವ ಕನ್ನಡಿಗರು ಹಾಗೂ ಯಕ್ಷಗಾನ ಅಭಿಮಾನಿಗಳಿಗೆ ಕರಾವಳಿಯ ಶ್ರೀಮಂತ ಯಕ್ಷಗಾನ ಪರಂಪರೆಯ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ


