ಧಾರವಾಡ : ಸರಕಾರದ ನಿರ್ದೇಶನದಂತೆ ಎಲ್ಲ ಇಲಾಖೆಗಳ ಮೂಲಕವೇ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಜನಪರ ಕೆಲಸಗಳು ನಡೆಯುತ್ತವೆ. ಹಾಗಾಗಿ ರಾಜ್ಯದ ವಿಕಾಸದಲ್ಲಿ ಸರಕಾರಿ ನೌಕರರ ಪಾತ್ರ ಅಧಿಕವಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಜಿ.ಎಸ್.ಪಾಟೀಲ ಹೇಳಿದರು.

ಅವರು ಸೋಮವಾರ ನಗರದ ಕ.ವಿ.ವ.ಸಂಘದ ಡಾ.ಪಾಪು ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಬೆಳಗಾವಿ(ಕಿತ್ತೂರು ಕರ್ನಾಟಕ) ವಿಭಾಗ ಮಟ್ಟದ ಸರಕಾರಿ ನಿವೃತ್ತ ನೌಕರರ ಒಂದು ದಿನದ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಶಾಸಕರು-ಸಚಿವರು ಸೇರಿ ಸದನದಲ್ಲಿ ರೂಪಿಸುವ ಎಲ್ಲಾ ಕಾನೂನಾತ್ಮಕ ಅಧಿನಿಯಮಗಳನ್ನು ನಿಖರ ನೆಲೆಯಲ್ಲಿ ಅನುಷ್ಠಾನಗೊಳಿಸುವವರೇ ಸರಕಾರಿ ನೌಕರರು. ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಇಲಾಖೆಯೂ ಸೇರಿ ಎಲ್ಲ ಸರಕಾರಿ ನೌಕರರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದೇಶಗಳನ್ನು ಪಾಲಿಸುವಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆಗೈದಿದ್ದಾರೆ ಎಂದು ಶ್ಯಾಘಿಸಿದರು.

ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್.ಭೈರಪ್ಪ ಮಾತನಾಡಿ, ಸುಮಾರು 30-40 ವರ್ಷಗಳವರೆಗೆ ಗೌರವಯುತವಾಗಿ ಸರಕಾರಿ ಸೇವೆಗೈದ ನಿವೃತ್ತ ನೌಕರರಿಗೆ ಸಕಾಲಕ್ಕೆ ನಿವೃತ್ತಿಯ ಎಲ್ಲಾ ಸೌಲಭ್ಯಗಳು ಲಭಿಸಬೇಕು. ಕಾಲಕಾಲಕ್ಕೆ ಪಿಂಚಣಿ ಪರಿಷ್ಕರಣೆ, ಕೇಂದ್ರ ಸಮಾನ ಪಿಂಚಣಿ ಸೌಲಭ್ಯಗಳ ನೀಡಿಕೆ, ನಿವೃತ್ತ ನೌಕರರ ಆರೋಗ್ಯ ರಕ್ಷಣೆಗೆ ಪೂರಕ ವೈದ್ಯಕೀಯ ಸೌಲಭ್ಯಗಳ ನೀಡಿಕೆಯೂ ಸೇರಿದಂತೆ ಸರಕಾರ ನಿವೃತ್ತ ನೌಕರರ ಯೋಗಕ್ಷೇಮಕ್ಕೆ ಸದಾಕಾಲವೂ ಸ್ಪಂದಿಸಬೇಕು ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ, ಎಐಪಿಟಿಎಫ್ ಅಧ್ಯಕ್ಷ ಬಸವರಾಜ ಗುರಿಕಾರ, ಸಾಹಿತಿ ವೆಂಕಟೇಶ ಮಾಚಕನೂರ, ಶಿಕ್ಷಣ ಇಲಾಖೆಯ ವಿಶ್ರಾಂತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಮಾತನಾಡಿದರು. ಶಾಸಕ ಎಂ.ಆರ್.ಪಾಟೀಲ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಮೇಲ್ಮನೆ ಮಾಜಿ ಸಬಾಪತಿ ವೀರಣ್ಣ ಮತ್ತಿಗಟ್ಟಿ, ರಂಗೇಗೌಡ, ಎಸ್.ಎಫ್.ಸಿದ್ಧನಗೌಡರ, ಬಿ.ಎಂ.ಸೂರಗೊ0ಡ, ಎಸ್.ಬಿ.ಸಿದ್ನಾಳ, ಎಸ್.ಜಿ.ಬಿರಾದಾರ, ಎಸ್.ಬಿ.ಅಣ್ಣಿಗೇರಿ, ವ್ಹಿ.ಎಂ. ಹೆಗಡೆ, ಕೆ.ಎಚ್.ಬೇಲೂರ, ಶಂಕರ ಹಲಗತ್ತಿ, ಶಿವಶಂಕರ ಹಿರೇಮಠ, ಆರ್.ಸಿ.ಹಲಗತ್ತಿ, ಎಸ್.ಬಿ.ಕೊಡ್ಲಿ, ಆರ್.ಎಸ್. ಮುಳ್ಳೂರ, ರಾಜಶೇಖರ ಹೊನ್ನಪ್ಪನವರ, ವ್ಹಿ.ಎಫ್.ಚುಳಕಿ, ನಾರಾಯಣ ಭಜಂತ್ರಿ, ಡಾ.ಪಿ.ಎಸ್.ಲಗಮಣ್ಣವರ, ಎಚ್.ಎಸ್.ಬಡಿಗೇರ, ಗುರು ಪೋಳ, ಎಸ್.ಜಿ.ಬಿಸೇರೊಟ್ಟಿ ಮತ್ತು ಶಾರದಮ್ಮ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿವಿಧ ಕ್ಷೇತ್ರಗಳ ಗಣ್ಯರನ್ನು ಹಾಗೂ ಹಿರಿಯ ಸಾಧಕ ನಿವೃತ್ತ ನೌಕರರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಪಾಟೀಲ ನಲವಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗುರು ತಿಗಡಿ ನಿರೂಪಿಸಿದರು. ಕೋಶಾಧ್ಯಕ್ಷ ಎ.ಬಿ.ಚನವೀರಗೌಡರ ವಂದಿಸಿದರು. ವೈ. ಆರ್. ರಾಯನಗೌಡರ, ಎಸ್.ಎಂ. ದಾನಪ್ಪಗೌಡ್ರ, ಮಹಾಂತೇಶ ನರೇಗಲ್, ವೈ.ಎಚ್. ಬಣವಿ, ಸಿ.ಎಂ. ಕಿತ್ತೂರ, ಎ.ಎಫ. ರೇಷ್ಮೆ, ಎನ್.ಎಫ್.ನದಾಫ್, ಗುರುಸಿದ್ದಪ್ಪ ರೊಟ್ಟಿ, ಕೆ.ಎನ್. ಹೊಸಮನಿ, ಆರ್.ಎನ್. ಬಸ್ತವಾಡಕರ, ಎನ್. ಬಿ. ಬೀರಣ್ಣವರ, ಗಂಗವ್ವ ಕೋಟಿಗೌಡರ, ತೇಜಸ್ವಿನಿ ರೇವಡಿಗಾರ, ಎಂ.ಎಸ್. ಮೆಣಸಿನಕಾಯಿ, ವಿ.ಡಿ.ಯರಗುಪ್ಪಿ, ಎ.ವಿ.ಜಯರಾಮನವರ, ಆರ್.ಬಿ. ಬಾಳನಗೌಡ್ರ, ಸುರೇಶ ಪಾಟೀಲ, ಎಫ್.ಎ. ಯಕಲಾಸಪುರ ಸೇರಿದಂತೆ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

