ನಗೋಯಾ: ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಭಾರತ ಚಿನ್ನದ ಖಾತೆ ತೆರೆದಿದ್ದು, ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತೀಯ ತಂಡ ಚಾಂಪಿಯನ್ ಆಗಿದೆ.
ಕಿರಣ್ ಪಹಲ್, ಮಚೆಟ್ಟಿರ ಪೂವಮ್ಮ, ಪ್ರಾಚಿ ಹಾಗೂ ವಿಥ್ಯಾ ರಾಮರಾಜ್ ಒಳಗೊಂಡ ತಂಡವು ಫೈನಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 3 ನಿಮಿಷ 29.69 ಸೆಕೆಂಡ್ಗಳಲ್ಲಿ ಗುರಿ ತಲುಪಿತು. ಆರಂಭದಿಂದಲೇ ತೀವ್ರ ಪೈಪೋಟಿ ಕಂಡುಬಂದರೂ ಭಾರತೀಯ ಓಟಗಾರ್ತಿಯರು ಕೊನೆಯ ಹಂತದಲ್ಲಿ ಮುನ್ನಡೆ ಕಾಯ್ದುಕೊಂಡು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಬಹ್ರೇನ್ ತಂಡ 3:30.21 ಸೆಕೆಂಡ್ಗಳಲ್ಲಿ ಬೆಳ್ಳಿ ಹಾಗೂ ಚೀನಾ ತಂಡ 3:31.02 ಸೆಕೆಂಡ್ಗಳಲ್ಲಿ ಕಂಚಿನ ಪದಕ ಗೆದ್ದಿತು.
ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕವನ್ನು ದಾಖಲಿಸಿತು. ಪುರುಷರ 4×400 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

ವಿಥ್ಯಾ ರಾಮರಾಜ್ಗೆ ಮೂರನೇ ಪದಕ
ಮಹಿಳೆಯರ ರಿಲೇಯಲ್ಲಿ ಚಿನ್ನ ಗೆದ್ದ ವಿಥ್ಯಾ ರಾಮರಾಜ್ ಅವರಿಗೆ ಇದು ಏಷ್ಯನ್ ಗೇಮ್ಸ್ನ ಮೂರನೇ ಪದಕವಾಗಿದೆ. ಈ ಮೊದಲು ಅವರು ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ಕಂಚು ಹಾಗೂ ಮಿಕ್ಸ್ಡ್ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.ಇದೀಗ ಮಹಿಳೆಯರ 4×400 ಮೀಟರ್ ರಿಲೇಯ ಚಿನ್ನದೊಂದಿಗೆ ವಿದ್ಯಾ ರಾಮರಾಜ್ ಅವರ ಪದಕಗಳ ಸಂಖ್ಯೆ ಮೂರಕ್ಕೆ ಏರಿದೆ.

