ಮಂಗಳೂರು :ನಿಟ್ಟೆ ವಿಶ್ವವಿದ್ಯಾನಿಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಕಚೇರಿ ಅಧೀಕ್ಷಕರಾದ ಕಳಿಯೂರು ದೇವಸ್ಯ ಗುತ್ತು ಸುಮಿತ ವಿಜಯ್ ಶೆಟ್ಟಿ ಮಂಡಿಸಿದ “ಧಾರ್ಮಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನದಲ್ಲಿ ಕಾಸರಗೋಡು ಜಿಲ್ಲೆಯ ಬಂಟ ಮನೆತನಗಳ ಕೊಡುಗೆ” ಎಂಬ ಮಹಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ. ಶ್ರೀನಿವಾಸ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮಾರ್ಗದರ್ಶಕರಾದ ಡಾಕ್ಟರ್ ರಾಜೇಶ್ ಬೆಜ್ಜಂಗಳ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
ಇವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನಿಕಟ ಪೂರ್ವ ಅಧ್ಯಕ್ಷರು ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀಯುತ ವಿಜಯಕುಮಾರ್ ಶೆಟ್ಟಿ ಇವರ ಪತ್ನಿ ಮತ್ತು ಮಂಗಲ್ಪಾಡಿ ಹಿತ್ತಿಲು ಬಾರಿಗೆ ಕೊರಗಪ್ಪ ಚೌಟ ಕುಂಬಡಾಜೆ ಮತ್ತು ಕಳಿಯೂರು ದೇವಸ್ಯ ಗುತ್ತು ದಿ. ಶೀಲಾ ಚೌಟ ಇವರ ಪುತ್ರಿ.
.

