ಮಂಗಳೂರು: ಮಂಗಳೂರು ದಸರಾ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಹುಲಿ ಕುಣಿತದ ಸಂಭ್ರಮಕ್ಕೆ ಕೊಡಿಯಾಲ್ ಬೈಲ್ ಸಜ್ಜಾಗಿದೆ. ಲೆಜೆಂಡ್ ಟೈಗರ್ಸ್ ಕೊಡಿಯಾಲ್ ಬೈಲ್ ವತಿಯಿಂದ ಅಕ್ಟೋಬರ್ 18ರಂದು ಭಾನುವಾರ ಸಂಜೆ 7 ಗಂಟೆಗೆ ಹುಲಿ ಕುಣಿತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪಿವಿಎಸ್ ಕಲಾಕುಂಜದ ಸಮೀಪವಿರುವ ಕೊಡಿಯಾಲ್ ಬೈಲ್ ಫ್ರೆಂಡ್ಸ್ ಎದುರು, ಕಾರ್ಯಕ್ರಮ ನಡೆಯಲಿದ್ದು, ಹುಲಿ ಕುಣಿತದ ಮೂಲಕ ಜನರಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾ ಸಂಭ್ರಮವನ್ನು ವೀಕ್ಷಿಸಬೇಕೆಂದು ಆಯೋಜಕರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

