ವಾರಾಣಸಿ (ಉ.ಪ್ರ.) : ಕಾಶಿ ಪೀಠದ 85ನೇ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಹೆಸರಿಗೆ ತಕ್ಕಂತೆ ಇಡೀ ವಿಶ್ವವನ್ನೇ ಪ್ರೀತಿಸುತ್ತಿದ್ದು, ಜ್ಞಾನ ಪ್ರಸಾರಕ್ಕೆ ಅದರಲ್ಲೂ ಮುಖ್ಯವಾಗಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಕಾಶಿ ಪೀಠದಲ್ಲಿ ನಡೆದ ಲಿಂಗೈಕ್ಯ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರ 37ನೇ ಪುಣ್ಯ ಸ್ಮರಣೋತ್ಸವ ಸಮಾರಂಭ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. 1948 ರಿಂದ 1989 ರವರೆಗೆ 41 ವರ್ಷಗಳ ಪರ್ಯಂತ ಅವ್ಯಾಹತವಾಗಿ ಧರ್ಮ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಕಾರ್ಯಗಳನ್ನು ಮಾಡಿರುವ ಪೂಜ್ಯರು, ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ತುಂಬೆಲ್ಲಾ ಧರ್ಮ ಜಾಗೃತಿ ಯಾತ್ರೆ ಕೈಕೊಂಡು ಸರ್ವ ಸಮಾಜಗಳ ಸಕಲ ಸದ್ಭಕ್ತ ಸಮೂಹಕ್ಕೆ ಧರ್ಮ ಸಂಸ್ಕಾರ ಮತ್ತು ಜೀವನಮೌಲ್ಯಗಳನ್ನು ಬೋಧಿಸಿದ್ದರು. ವಿಶೇಷವಾಗಿ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ಜೊತೆಗೆ ಪುಣೆ ಮಹಾನಗರದಲ್ಲಿ ಉನ್ನತ ಶಿಕ್ಷಣದ ವ್ಯಾಸಂಗಕ್ಕಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಿದ್ದು, ಇಂದಿಗೂ ಬಡ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.

ವಿ.ವಿ.ಯಲ್ಲಿ ಪೀಠ ಸ್ಥಾಪನೆ : ಕಾಶಿಯ ಸಂಪೂರ್ಣಾನAದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವೀರಶೈವ ಅಧ್ಯಯನ ಪೀಠವನ್ನು ಸ್ಥಾಪಿಸಿ ಐತಿಹಾಸಿಕ ಕ್ರಾಂತಿ ಮಾಡಿದರು. ಈ ವರೆಗೆ ಅಲ್ಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಚಾರ್ಯ ಪರೀಕ್ಷೆಯ ಅಧ್ಯಯನ, ಸಂಶೋಧನೆ ಮಾಡಿದ್ದಾರೆ. ಶಿವಾಗಮಗಳನ್ನು ವಿದ್ವಾಂಸರಿ0ದ ಸಂಶೋಧಿಸಿ ರಾಷ್ಟಿçಯ ಅಂತರಾಷ್ಟಿçಯ ಭಾಷೆಗಳಿಗೆ ಅನುವಾದಿಸಿ ನೂರಾರು ಗ್ರಂಥಗಳನ್ನು ಮುದ್ರಣಗೊಳಿಸಿ ಜಗದ್ಗುರು ವಿಶ್ವೇಶ್ವರ ಶಿವಾಚಾರ್ಯ ಭಗವತ್ಪಾದರು ಪಾತಃಸ್ಮರಣೀಯರಾಗಿದ್ದಾರೆ ಎಂದರು.
ಪುಷ್ಪನಮನ : ಸಮಾರಂಭದಲ್ಲಿ ಪೀಠದ ವ್ಯವಸ್ಥಾಪಕ ಆರ್.ಕೆ.ಸ್ವಾಮಿ, ಶಿವಾನಂದ ಹಿರೇಮಠ, ನಳಿನಿ ಚಿರಮೆ, ಉದಯಬಾನು ಸಿಂಗ್, ಶಿವಮೂರ್ತಿ ಹಿರೇಮಠ, ಗುರುಕುಲದ ವಿದ್ಯಾರ್ಥಿಗಳು, ಕರ್ನಾಟಕ ಮತ್ತು ಮಹಾರಾಷ್ಟç ರಾಜ್ಯಗಳ ಭಕ್ತರು ಪುಷ್ಪನಮನ ಸಲ್ಲಿಸಿದರು. ಪುಣ್ಯಾರಾಧನೆ ಅಂಗವಾಗಿ ಲಿಂಗಕ್ಯ ಜಗದ್ಗುರುಗಳ ಗದ್ದುಗೆಗೆ ರುದ್ರಾಭಿಷೇಕ ಬಿಲ್ವಾರ್ಚನೆ ಮಹಾಮಂಗಳಾರತಿ ನಡೆದವು. ನಂತರ ಮಹಾಪ್ರಸಾದ ವಿತರಣೆ ನೆರವೇರಿತು.


