ಮಂಗಳೂರು :ಕಳೆದ ಐದು ತಿಂಗಳುಗಳಿಂದ ಸಂಡೆ ಬಜಾರ್ ವ್ಯಾಪಾರ ತೆರವು ಕಾರ್ಯಾಚರಣೆ ವಿರುದ್ಧದ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದ್ದು ಮಂಗಳೂರು ನಗರಪಾಲಿಕೆಯ ಪಟ್ಟಣ ವ್ಯಾಪಾರ ಸಮಿತಿ ನಗರದ ಸ್ಟೇಟ್ ಬ್ಯಾಂಕ್ ಬಳಿ ರೋಜಾರಿಯೋ ರಸ್ತೆಯಲ್ಲಿ ಸಂಡೆ ಬಜಾರ್ ವ್ಯಾಪಾರಕ್ಕೆ ಅನುಮೋದನೆ ನೀಡಿರುತ್ತದೆ ಈ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (CITU) ಇದರ ಕಚೇರಿ ಎದುರು ಸಂಡೆ ಬಜಾರ್ ಮತ್ತು ಬೀದಿಬದಿ ವ್ಯಾಪಾರಸ್ಥರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ಪ್ರಮುಖರಾದ ಬಿ.ಕೆ ಇಮ್ತಿಯಾಜ್, ಮುಜಾಫರ್ ಅಹ್ಮದ್, ಸಂತೋಷ್ ಆರ್ ಎಸ್, ಶಿವಪ್ಪ, ಮುತ್ತುರಾಜ್, ವಿಜಯ್ ಜೈನ್ ಪ್ರದೀಪ್, ಗೀತಾ ಬಾಯಿ, ಗುಡ್ಡಪ್ಪ ಸಿದ್ದಮ್ಮ, ಅಶ್ರಫ್, ಶಿವಾನಂದ ನಾಯ್ಕ್, ಗದಿಗಪ್ಪ, ಹನುಮಂತ, ಮತ್ತಿತರರು ಉಪಸ್ಥಿತರಿದ್ದರು


