ಮಂಗಳೂರು: ಮಾತಾ ಅಮೃತಾನಂದಮಯಿ ಮಠದ ಸೇವಾ ವಿಭಾಗವಾದ ಮಂಗಳೂರು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ 2026–28ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಆರ್. ಅಮೀನ್ ಅವರು ಪುನರಾಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ವಕೀಲೆ ಪುಷ್ಪಲತಾ ಗಟ್ಟಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಡಾ.ಸುಚಿತ್ರಾ ರಾವ್, ಡಾ.ಅಶೋಕ್ ಶೆಣೈ, ಕೃಷ್ಣ ಶೆಟ್ಟಿ ಹಾಗೂ ದಿನೇಶ್ ರಾವ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಕೋಶಾಧಿಕಾರಿಯಾಗಿ ಸಿಎ ರಾಮನಾಥ್ ನಾಯಕ್ ಆಯ್ಕೆಯಾಗಿದ್ದು, ವಾಮನ್ ಮೈಂದನ್ ಮತ್ತು ಶರೂನ್ ರಾಜ್ ಅವರು ಜೊತೆ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಮಿತಿಯ ಸದಸ್ಯರಾಗಿ ಆರ್.ಕೆ.ಶಿರೂರ್, ಭರತ್ ಕುಮಾರ್ ಎರ್ಮಾಳ್, ಸಿಎ ಸುದೇಶ್ ರೈ, ಸೋಮಶೇಖರ್ ಹಾಗೂ ಭರತ್ ಬಂಗೇರ ಆಯ್ಕೆಯಾಗಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.


