ಧಾರವಾಡ : ಬದುಕಿನ ವಿದ್ಯಮಾನಗಳಲ್ಲಿ ಇರಬಹುದಾದ ಶತ್ರುಭಾವಗಳನ್ನು ಮರೆತು ಮಿತ್ರಭಾವಗಳನ್ನು ಬೆಳೆಸುವ ವಿಜಯದಶಮಿ ಸ್ನೇಹ ಸಿಂಚನದ ಸಿಹಿ ಹಬ್ಬವಾಗಿದೆ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ವಿಜಯದಶಮಿಯ ಅಂಗವಾಗಿ ಬುಧವಾರ ತಮ್ಮ ಶ್ರೀಮಠದಲ್ಲಿ ಶಮೀಪೂಜೆ ನೆರವೇರಿಸಿ ವಿಜಯದಶಮಿಯ ಶಾಂತಿ ಸಂದೇಶ ಅನುಗ್ರಹಿಸಿದರು. ಭಾರತದ ಸನಾತನ ಸಂಸ್ಕೃತಿ-ಪರಂಪರೆಯ ಹಬ್ಬಗಳು ಲೋಕಕಲ್ಯಾಣದ ಆಶಯಗಳನ್ನು ಹೊಂದಿವೆ. ನಿಸರ್ಗವನ್ನು ಕೇಂದ್ರೀಕರಿಸಿ ಮನುಷ್ಯತ್ವವನ್ನು ಅರಿಯುವಲ್ಲಿ ನಮ್ಮ ಭಾರತೀಯ ಹಬ್ಬಗಳು ತಮ್ಮದೇ ಆದ ವಿಶಿಷ್ಟ ಸಂದೇಶಗಳನ್ನು ವಿಸ್ತೃತವಾಗಿ ತಿಳಿಸುತ್ತವೆ ಎಂದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ ಗ್ರಾಮಗಳೂ ಸೇರಿದಂತೆ ಹುಬ್ಬಳ್ಳಿ-ಧಾರವಾಡದ ಅನೇಕ ಭಕ್ತರು ಶ್ರೀಮಠಕ್ಕೆ ಆಗಮಿಸಿ ಉಭಯ ಶ್ರೀಗಳಿಗೆ ಬನ್ನಿ ಸಮರ್ಪಿಸಿ ಆಶೀರ್ವಾದ ಪಡೆದರು.

ಶಮೀಸೀಮೋಲ್ಲಂಘನ : ಅಮ್ಮಿನಬಾವಿ ಗ್ರಾಮದೇವಿಯರಾದ ಶ್ರೀದುರ್ಗಾಮಾತೆ ಹಾಗೂ ದ್ಯಾಮವ್ವತಾಯಿ ದೇವಾಲಯದಲ್ಲಿ ಅ.11 ರಂದು ಸ್ಥಾಪಿಸಿದ್ದ ಘಟ್ಟದ ಕಲಶಕ್ಕೆ ಬುಧವಾರ ಸಂಜೆ ಪೂಜೆಸಲ್ಲಿಸಿ ವಿಸರ್ಜಿಸಲಾಯಿತು. ಉಭಯ ಆದಿಶಕ್ತಿ ಮಾತೆಯರ ಪಲ್ಲಕ್ಕಿ ಉತ್ಸವವು ನಂದಿಕೋಲು, ಕರಡಿಮಜಲು ಸಮೇತ ಗ್ರಾಮದ ಗಡಿ ದಾಟಿ ಮೊರಬ ರಸ್ತೆಯಲ್ಲಿರುವ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿಯನ್ನು ಸ್ವೀಕರಿಸಿ ಶಮೀಸೀಮೋಲ್ಲಂಘನ ಜರುಗಿಸಲಾಯಿತು. ನಂತರ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿದರು. ಸೋಮಲಿಂಗಶಾಸ್ತಿç ಗುಡ್ಡದಮಠ, ಬಸವರಾಜ ಕೊಳ್ಳಿ, ಶ್ರೇಯಾಂಶ ದೇಸಾಯಿ, ಈರಣ್ಣ ಕುಸೂಗಲ್ಲ, ಈರಪ್ಪ ಕಡ್ಲೆಪ್ಪನವರ, ಚಂದ್ರಶೇಖರ ನಾಗಣ್ಣವರ, ರಮೇಶ ಮೇಟಿ, ಮಲ್ಲಪ್ಪ ಕದಡಿ, ಈಶ್ವರ ಬೆಣ್ಣಿ, ಡಾ.ಈರಣ್ಣ ಅಮ್ಮಿನಬಾವಿ, ಈಶ್ವರ ಪತ್ತಾರ, ಸಂತೋಷ ಕೋಡಬಳೆ, ರವಿ ಇಂದೂರ, ಈರಯ್ಯ ಹಿರೇಮಠ, ರುದ್ರಯ್ಯ ಮಠಪತಿ ಇತರರು ಇದ್ದರು
PHOTO CAPTION

