ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ವತಿಯಿಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವ ‘ಶ್ರೀನೋವಾ-2026’ ಅ.30 ಮತ್ತು 31ರಂದು ನಡೆಯಲಿದೆ.
ಶುಕ್ರವಾರ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕಿ ಹಾಗೂ ಇನ್ ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ ನ ಡೀನ್ ಡಾ| ಪವಿತ್ರ ಕುಮಾರಿ ಅವರು ಮಂಗಳೂರಿನ ಪಾಂಡೇಶ್ವರ ಸಿಟಿ ಕ್ಯಾಂಪಸ್, ನ್ಯೂ ಕ್ಯಾಂಪಸ್ ಹಾಗೂ ಹಂಪನಕಟ್ಟೆಯ ಏವಿಯೇಷನ್ ಕ್ಯಾಂಪಸ್ಗಳಲ್ಲಿ ಉತ್ಸವ ಆಯೋಜಿಸಲಾಗಿದೆ. ಸಾಂಸ್ಕೃತಿಕ, ಕ್ರೀಡೆ, ಆಹಾರ, ಸೃಜನಾತ್ಮಕ ಚಟುವಟಿಕೆ, ವ್ಯವಹಾರ, ಉದ್ಯಮಶೀಲತೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಇ-ಸ್ಪೋರ್ಟ್ಸ್ ವಿಭಾಗಗಳಲ್ಲಿ 32 ಸ್ಪರ್ಧೆಗಳು ನಡೆಯಲಿವೆ.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಒಟ್ಟು ₹2.5 ಲಕ್ಷ ಬಹುಮಾನ ನೀಡಲಾಗುವುದು. ಒಟ್ಟಾರೆ ವಿಜೇತ ತಂಡಕ್ಕೆ ₹50 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಅ.30 ರಂದು ಕ್ರೀಡೆ, ಆಹಾರ ಮತ್ತು ಸೃಜನಾತ್ಮಕ ಸ್ಪರ್ಧೆಗಳ ಜತೆಗೆ ಸಂಜೆ 4ರಿಂದ ಲೈವ್ ಬ್ಯಾಂಡ್ ಶೋ ನಡೆಯಲಿದೆ. ಅ.31ರಂದು ನೃತ್ಯ, ರ್ಯಾಂಪ್ ವಾಕ್, ರಂಗೋಲಿ ಹಾಗೂ ತಾಂತ್ರಿಕ ಸ್ಪರ್ಧೆಗಳು ಜರಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಡೀನ್ ಡಾ.ವೆಂಕಟೇಶ್ ಅಮಿನ್, ಡಾ.ತ್ರಿಶಾಲಾ ನೊರೊನ್ಹಾ ಹಾಗೂ ಪ್ರಾಂಜಲಿ ಮಥ್ರೆ ಉಪಸ್ಥಿತರಿದ್ದರು.

