ಧಾರವಾಡ : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿ0ಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಸ್ತುತ ಶ್ರೀಮಠದ ಉಭಯ ಶ್ರೀಗಳ ಸಂಕಲ್ಪದಂತೆ ಮಾ.14(ಶನಿವಾರ) ಮತ್ತು ಮಾ.15(ರವಿವಾರ) ಎರಡೂ ದಿನಗಳಂದು ಮುಂಜಾನೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಜರುಗಲಿವೆ.
ಮಾ.14 ರಂದು ಇಲ್ಲಿಯ ಮಂಜುಶ್ರೀ ನಗರದ ಎಸ್.ಡಿ.ಎಂ. ನಾರಾಯಣ ಹಾರ್ಟ ಸೆಂಟರ್ ವತಿಯಿಂದ ಹೃದಯ ರೋಗತಜ್ಞ ಡಾ. ವಿನಯಕುಮಾರ ಪಿ. ಅವರ ನೇತೃತ್ವದಲ್ಲಿ ಬಿ.ಪಿ., ಆರ್ಬಿಎಸ್, ಇಸಿಜಿ ಮತ್ತು ಎಕೋ ತಪಾಸಣೆಯನ್ನು ಈ ಶಿಬಿರದಲ್ಲಿ ಮಾಡಲಾಗುವುದು.
ಮಾ.15 ರಂದು ನಗರದ ಶಿವಾಜಿ ಸರ್ಕಲ್ ಬಳಿ ಇರುವ ಆರ್ಥೋ ಕೇರ್ ಕ್ಲಿನಿಕ್ ವತಿಯಿಂದ ಎಲುಬು-ಕೀಲು ತಜ್ಞ ವೈದ್ಯ ಡಾ.ವಿಕಾಸ ಗುರು ತಿಗಡಿ ಅವರ ನೇತೃತ್ವದಲ್ಲಿ ಮಂಡಿನೋವು, ಕೀಲು ಸವಕಳಿ, ಬೆನ್ನು ಮೂಳೆ ಮತ್ತು ಕುತ್ತಿಗೆ ನೋವು, ಕೈ-ಕಾಲು ಸೆಳೆತ, ಎಲುಬು ಹಾಗೂ ನರರೋಗಗಳು, ವಕ್ರಕಾಲು, ಸಂದಿವಾತ, ಅರ್ಥೋಸ್ಕೋಪಿ ಚಿಕಿತ್ಸೆಗಳೂ ಸೇರಿದಂತೆ ವಿವಿಧ ತಪಾಸಣೆ ನಡೆಸಲಾಗುವುದು.
ಎರಡೂ ಶಿಬಿರಗಳು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಆವರಣದಲ್ಲಿಯೇ ನಡೆಯುತ್ತಿದ್ದು, ಸಾರ್ವಜನಿಕರು ಶಿಬಿರಗಳ ಲಾಭ ಪಡೆದುಕೊಳ್ಳುವಂತೆ ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

