
ಮುಂಬೈ : ಐದು ಕೋಟಿಯಲ್ಲಿ ವೆಚ್ಚದಲ್ಲಿ ನಿರ್ಮಾಣಗೊಂಡು 125 ಕೋಟಿ ಲೂಟಿ ಮಾಡಿದ ಸು ಫ್ರಮ್ ಸೋ ಚಿತ್ರ, ಸದ್ಯ ಮರಾಠಿ ಭಾಷೆಯಲ್ಲಿ ಮಿಂಚೋಕೆ ಸಿದ್ಧವಾಗಿದೆ. ಸು ಫ್ರಮ್ ಸೋ..ಕಳೆದ ವರ್ಷ ಜುಲೈ 25ರಂದು ತೆರೆಕಂಡ ಕನ್ನಡದ ಸಿನಿಮಾ. ರಾಜ್ ಬಿ ಶೆಟ್ಟಿ ನಟಿಸಿ, ಶಶಿರಾಜ್ ಶೆಟ್ಟಿ ಬರೋಡ, ರವಿ ಕಳಸ ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಜೆ.ಪಿ ತುಮೀನಾಡು ಆ್ಯಕ್ಷನ್ ಕಟ್ ಹೇಳಿ, ಬಣ್ಣ ಕೂಡ ಹಚ್ಚಿದ್ರು. ಶನೀಲ್ ಗೌತಮ್, ಸಂಧ್ಯಾ ಅರಕೆರೆ ಪ್ರಧಾನ ಪಾತ್ರಗಳನ್ನ ಪೋಷಿಸಿದ್ರು. ಐದೇ ಐದು ಕೋಟಿಯಲ್ಲಿ ತಯಾರಾದ ಈ ಕಾಮಿಡಿ ಡ್ರಾಮಾ, ಬಾಕ್ಸ್ ಆಫೀಸ್ನಲ್ಲಿ ಲೂಟಿ ಮಾಡಿದ್ದು ಮಾತ್ರ ಬರೋಬ್ಬರಿ 125 ಕೋಟಿ ಅಂದ್ರೆ ನೀವು ನಂಬಲೇಬೇಕು.

ಅಕ್ಷಯ್ ಕುಮಾರ್, ಅಜಯ್ ದೇವಗನ್ರಿಂದ ಹಿಡಿದು, ಇಡೀ ಭಾರತೀಯ ಚಿತ್ರರಂಗವೇ ಸು ಫ್ರಮ್ ಸೋನ ಕೊಂಡಾಡಿತ್ತು. ಇದೀಗ ಅದೇ ಸು ಫ್ರಮ್ ಸೋ ಚಿತ್ರ ಮರಾಠಿಗೆ ರಿಮೇಕ್ ಆಗಿದೆ. ಇದೇ ಜೂನ್ 5ಕ್ಕೆ ಬಿಡುಗಡೆ ಕೂಡ ಆಗ್ತಿದೆ. ತುಂಬಾಡ್ಚಿ ಮಂಜುಳ ಅನ್ನೋ ಟೈಟಲ್ ಮರಾಠಿ ಚಿತ್ರಕ್ಕೆ ಇಟ್ಟಿದ್ದು, ವಿವಿದ್ ಕೊರಗೋಂವ್ಕರ್ ನಿರ್ದೇಶನದಲ್ಲಿ ಸಾಯಿ ತಮ್ಹನ್ಕರ್, ಜಿತೇಂದ್ರ ಜೋಶಿ ಹಾಗೂ ಓಂ ಬುಟ್ಕರ್ ಲೀಡ್ನಲ್ಲಿ ನಟಿಸಿದ್ದಾರೆ. ಟೀಸರ್, ಟ್ರೈಲರ್ ಇಂಪ್ರೆಸ್ಸೀವ್ ಆಗಿದ್ದು, ಮರಾಠಿಗರು ಕಾತರರಾಗಿದ್ದಾರೆ ಮಂಜುಳ ಕಮಾಲ್ ನೋಡೋಕೆ.

