ಮಂಗಳೂರು : ಇರಾನ್ -ಅಮೆರಿಕಾ- ಇಸ್ರೇಲ್ ಯುದ್ಧ ಇದು ದೇಶಕ್ಕೆ ಅಪಾಯವನನ್ನು ತಂದೊಡ್ಡುವ ಸಾಧ್ಯತೆ ಇದೆ .ಅಮೆರಿಕಾದ ಉದ್ದಟನದಿಂದ ವಿಶ್ವಕ್ಕೆ ದೊಡ್ಡ ಕಂಟಕವೇ ಎದುರಾಗಿದೆ .ಅಮೇರಿಕವು ತೈಲ ರಾಷ್ಟ್ರಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ಬಯಸುತ್ತಿದೆ .ಇದರಿಂದ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆಯನ್ನು ಕಾಣುತ್ತಿದೆ .ಟ್ರಂಪ್ ನಿರ್ಧಾರದಿಂದ ಈ ರೀತಿಯ ಪರಿಸ್ಥಿತಿ ಎದುರಾದರು ನಮ್ಮ ದೇಶದ ಪ್ರಧಾನಿ ಟ್ರಂಪ್ ಹಾಕಿದ ತಾಳಕ್ಕೆ ಕುಣಿಯುತ್ತಾ ಇದ್ದು ಅವರ ನಡೆಯನ್ನು ಪ್ರಶ್ನೆ ಮಾಡುವುದಿಲ್ಲ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ಪ್ರಧಾನಿ ನಡೆಯನ್ನು ಟೀಕಿಸಿದರು.

ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ದೇಶದಲ್ಲಿ ಸಿಲೆಂಡರ್ ಕೊರತೆ ಉಂಟಾದರೂ ಪ್ರಧಾನಿಯಾಗಲಿ, ಕೇಂದ್ರ ಸಚಿವೆ ಶೋಬ್ಬಕ್ಕವಾಗಲಿ, ಸಚಿವರಾಗಲಿ, ಸಂಸದರಾಗಲಿ ಈ ಬಗ್ಗೆ ಮಾತನಾಡುವುದೇ ಇಲ್ಲ, ಕಮರ್ಷಿಲ್ ಸಿಲಿಂಡರ್ ರಾತ್ರೋ ರಾತ್ರಿ ಬಂದ್ ಆಗುವ ಮುಖೇನ ಅದೆಷ್ಟೋ ಹೋಟೆಲ್ ಗಳು ಬಂದ್ ಆದವು ಇದರಿಂದ ಕಾರ್ಮಿಕರು ನಿರುದ್ಯೋಗಿಗಳಾದರು, ದೇವಾಲಯಗಳಿಗೆ ಮತ್ತು ಕಾರ್ಖಾನೆಗಳಿಗೆ ಇದರ ಬಿಸಿ ಈಗಾಗಲೇ ತಟ್ಟಿದೆ ಆದರೂ ಈ ಬಗ್ಗೆ ಕೇಂದ್ರ ಸರಕಾರ ಮಾತನಾಡುವುದೇ ಇಲ್ಲವೆಂದು ಕಿಡಿಕಾರಿದರು

ಕೇಂದ್ರ ಸರ್ಕಾರವು ತೊಘಲಕ್ ದರ್ಬಾರನ್ನು ನಡೆಸುತ್ತಾ ಇದೆ, ಅದಾನಿ ಅಂಬಾನಿಗೆ ಅಚ್ಚೇದಿನ್ ಬಿಟ್ಟರೆ ಇಲ್ಲಿನ ನಾಗರಿಕರಿಗೆ ಅಚ್ಚೇದಿನ್ ಅಲ್ಲ .ಕೇಂದ್ರ ಪೆಟ್ರೋಲಿಯಂ ಸಚಿವರು ಅನಿಲ ದಾಸ್ತಾನು ಇದೆ ಎಂದು ಹೇಳುತ್ತಾರೆ ಆದರೆ ಗ್ಯಾಸ್ ಪೂರೈಕೆ ನಿಲ್ಲಿಸಿದ್ದು ಯಾಕೆ …? ಬಿಕ್ಕಟೇ ಇಲ್ಲವೆಂದು ಕೇಂದ್ರ ಹೇಳುತ್ತಿದೆ ಆದರೂ ಎಸ್ಮಾ ಜಾರಿ ಮಾಡಿದ್ದು ಯಾಕೆ … ? ಎಂದು ಪ್ರಶ್ನೆ ಮಾಡಿದರು .
ಈ ಎಲ್ಲಾ ಸಮಸ್ಯೆಗೆ ಮೂಲ ಕಾರಣ ಟ್ರಂಪ್ ಹೇಳಿಕೆಗೆ ಮೋದಿ ಕಿವಿಯಾಗುತ್ತಿರುವುದು, ನನಗೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯೇ ಅಥವಾ ಡೊನಾಲ್ಡ್ ಟ್ರಂಪೇ ಎನ್ನುವುದಾಗಿ ಅನುಮಾನ ಮೂಡುತ್ತಿದೆ ಎಂದರು

ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್ , ಅಪ್ಪಿಲತಾ, ಶುಭೋದಯ ಆಳ್ವ ,ಸಲೀಮ್ , ನೀರಜ್ ಪಾಲ್, ಸುಹಾನ್ ಆಳ್ವ ಮುಂತಾದವರು ಉಪಸ್ಥಿತರಿದ್ದರು .

