ಧಾರವಾಡ : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀಗುರುಶಾಂತಲಿAಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.14, 15 ಮತ್ತು 16 ರಂದು ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಯಶಸ್ವಿಯಾಗಿ ಜರುಗಿದವು.


ಮಾ.14 ರಂದು ಎಸ್.ಡಿ.ಎಂ. ನಾರಾಯಣ ಹಾರ್ಟ ಸೆಂಟರ್ ವತಿಯಿಂದ ಹೃದಯ ರೋಗತಜ್ಞ ಡಾ. ವಿನಯಕುಮಾರ ಪಿ. ಅವರ ತಂಡವು ಬಿ.ಪಿ., ಆರ್ಬಿಎಸ್, ಇಸಿಜಿ ಮತ್ತು ಎಕೋ ತಪಾಸಣೆಯನ್ನು ಮಾಡಿದ್ದು, ಸುಮಾರು 177 ಜನರು ಪ್ರಯೋಜನ ಪಡೆದರು.


ಮಾ.15ರ ಶಿಬಿರದಲ್ಲಿ ನಗರದ ಶಿವಾಜಿ ಸರ್ಕಲ್ ಬಳಿ ಇರುವ ಆರ್ಥೋ ಕೇರ್ ಕ್ಲಿನಿಕ್ ವತಿಯಿಂದ ಎಲುಬು-ಕೀಲು ತಜ್ಞ ವೈದ್ಯ ಡಾ.ವಿಕಾಸ ತಿಗಡಿ ಅವರು ಮಂಡಿನೋವು, ಕೀಲು ಸವಕಳಿ, ಬೆನ್ನು ಮೂಳೆ ಮತ್ತು ಕುತ್ತಿಗೆ ನೋವು, ಕೈ-ಕಾಲು ಸೆಳೆತ, ಎಲುಬು ಹಾಗೂ ನರರೋಗಗಳು, ವಕ್ರಕಾಲು, ಸಂದಿವಾತ, ಅರ್ಥೋಸ್ಕೋಪಿ ಚಿಕಿತ್ಸೆಗಳೂ ಸೇರಿದಂತೆ ಸುಮಾರು 85 ಜನರು ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆಗಳನ್ನು ಪಡೆದರು.


ಮಾ.16 ರಂದು ಇಲ್ಲಿಯ ಲೈನ್ ಬಜಾರದ ಸಿಂಚನಾ ಕಣ್ಣು ಮತ್ತು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ವತಿಯಿಂದ ನೇತ್ರತಜ್ಞ ಡಾ. ಮಹೇಶ ಎನ್. ಬಿ. ಅವರು 84 ಜನರಿಗೆ ಉಚಿತ ನೇತ್ರ ತಪಾಸಣೆ ನಡೆಸಿ, 4 ಜನರಿಗೆ ಶಸ್ತçಚಿಕಿತ್ಸೆಗೆ ಶಿಫಾರಸು ಮಾಡಿದರು. ಶಿಬಿರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ತಜ್ಞ ವೈದ್ಯರನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಗೌರವಿಸಿ ಆಶೀರ್ವದಿಸಿದರು.

