ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಯುವಶಕ್ತಿ ಸೇವಾಪಥದ ವತಿಯಿಂದ ಟೀಮ್ ಸನಾತನ್ ಮಂಗಳೂರು ಆಶ್ರಯದಲ್ಲಿ 4 ನೇ ವಾರ್ಷಿಕ ಕಾರ್ಯಕ್ರಮವು ಮಾರ್ಚ್ 22ರಂದು ಉರ್ವದ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಬೆಳಗ್ಗೆ 9.30 ರಿಂದ ವಿವಿಧ ಸೇವಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಟೀಮ್ ಸನಾತನ್ ಮಂಗಳೂರು ಇದರ ಅಧ್ಯಕ್ಷರಾದ ಸಾಯಿ ಪ್ರಸಾದ್ ಶೆಟ್ಟಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವು ಬೆಳಗ್ಗೆ 9.30ಕ್ಕೆ ರಕ್ತದಾನ ಶಿಬಿರದೊಂದಿಗೆ ಆರಂಭವಾಗಲಿದೆ. ಸಂಜೆ 4 ಗಂಟೆಯಿಂದ ಕೀರ್ತನ್ ನಾಯ್ಕ್ ಮಡೂರು ಬಳಗದವರಿಂದ “ಭಕ್ತಿ ಸಂಗೀತ” ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ 20ಕ್ಕೂ ಹೆಚ್ಚು ಅಶಕ್ತ ಕುಟುಂಬಗಳಿಗೆ ಸೇವಾನಿಧಿ ಹಸ್ತಾಂತರ, ಸೇವಾಸಾಧಕರಿಗೆ ಗೌರವ, ಸೇವಾ ಸಂಸ್ಥೆಗಳಿಗೆ ಅಭಿನಂದನೆ ಹಾಗೂ ಮಿತ್ರ ಸಂಸ್ಥೆಗಳಿಗೆ ಪುರಸ್ಕಾರ ಪ್ರದಾನ ನಡೆಯಲಿದೆ ಎಂದರು.

ಸಾಂಸ್ಕೃತಿಕ ವೈಭವದಲ್ಲಿ ನೀಲಾಶ್ರೀ ಕಲಾವಿದರು ವಾಮದಪದವು ತಂಡದ ವತಿಯಿಂದ 40ಕ್ಕೂ ಹೆಚ್ಚು ಪ್ರತಿಭಾನ್ವಿತ ಕಲಾವಿದರಿಂದ “ಅಪ್ಪೆ ಭ್ರಮರಿ” ಎಂಬ ತುಳುನಾಡಿನ ಕಥಾನಿರೂಪಣೆ ಮತ್ತು ನೃತ್ಯ ಪ್ರದರ್ಶನ ನಡೆಯಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತೃಸಂಸ್ಥೆ ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷರಾದ ದೇವಿಪ್ರಸಾದ್ ಬೇಂಗದಡಿ,ಯುವಶಕ್ತಿ ಸೇವಾಪಥ ದ.ಕ ಯೋಜನಾ ಸಮಿತಿ ಸದಸ್ಯ ದಿನೇಶ್ ಬಡೆಕೊಟ್ಟು, ಯುವಶಕ್ತಿ ಸೇವಾಪಥ ಘಟಕದ ಪ್ರಮುಖರಾದ ಕಾರ್ತಿಕ್ ಶೆಟ್ಟಿ ಬರ್ಕೆ, ದೀಪಕ್ ಸಾಲಿಯಾನ್ ,ದೀಕ್ಷಿತ್ ಕುಲಾಲ್ ,ಕಾರ್ತಿಕ್ ಮುಂತಾದವರು ಉಪಸ್ಥಿತರಿದ್ದರು .

