ಮಂಗಳೂರು : ಸ್ಕಂದ ಶ್ರೀ ಸೇವಾ ಸಮಿತಿ ಪೆದ ಮಲೆ ನೀರು ಮಾರ್ಗ 12ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಮಾರ್ಚ್ 21ರಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರನ್ನು ಅವರ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಗುವುದು.
ಮಂಗಳೂರಿನ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು .ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಸ್ಥಾನದ ಅರ್ಚಕರಾದ ಶ್ರೀ ಕೆ. ಕೃಷ್ಣ ಅಡಿಗ ಧಾರ್ಮಿಕ ಉಪನ್ಯಾಸ ನೀಡುವರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕಳ, ಕೋಡಿಕಲ್ ಮಂಗಳೂರು ಮಹಾನಗರ ಪಾಲಿಕೆ ನಿಕಟ ಪೂರ್ವ ಸದಸ್ಯರಾದ ಕಿರಣ್ ಕುಮಾರ್, ಉದ್ಯಮಿ ವಿಕ್ರಂ ಕೆಮ್ಮಾಯಿ ,ಪಾಂಚಜನ್ಯ ಕೊಟ್ಟಾರ ಮುರುಳೀಧರ್, ಸುಜನ್ ದಾಸ್ ಕುಡುಪು, ಸುಬ್ರಾಯ ದೇವಸ್ಥಾನ ಮಾಣೂರು ಮೋಹಿನಿ ಮೋನಪ್ಪ ,ಉದ್ಯಮಿ ಲೋಕೇಶ್ ಪೂಜಾರಿ, ಉದ್ಯಮಿ ರಾಜೇಂದ್ರ ಕುಮಾರ್, ಅತಿಥಿಗಳಾಗಿ ಉಪಸ್ಥಿತರಿರುವರು . ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಸ್ಕಂದ ಶ್ರೀ ಸೇವಾ ಸಮಿತಿ ಅಧ್ಯಕ್ಷರಾದ ತಾರಾನಾಥ್ ಅವರು ವಹಿಸುವರು.

