ಕಾಸರಗೋಡು : ಇದೇ ಬರುವ ದಿನಾಂಕ 28ರಂದು ಶನಿವಾರ ಬೆಳಿಗ್ಗೆ 10ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಸಂಕೀರ್ಣದಲ್ಲಿರುವ “ಕನ್ನಡದ ಶಕ್ತಿ ಶ್ರೀ ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ – ಸರೋಜಾದೇವಿ ಉಚಿತ ಸಾರ್ವಜನಿಕ ವಾಚನಾಲಯ “ದಲ್ಲಿ ಕನ್ನಡ ಭವನದ ನೇತೃತ್ವದಲ್ಲಿ, ಕನ್ನಡ ಸಂಘ ಸಂಸ್ಥೆಗಳ ಸಹಯೋಗದಲ್ಲಿ, ಕರಾಳ ಮಸೂದೆಯ ವಿರುದ್ಧ ಪ್ರತಿಭಟನಾ ಸಭೆ ನಡೆಯಲಿದೆ.
28.3.2026. ರಂದು ಬೆಳಿಗ್ಗೆ 10ಗಂಟೆಗೆ ಆಯೋಜಿಸಿದ ಈ ಪ್ರತಿಭಟನಾ ಸಭೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಸೇರಿ ಅಭಿಪ್ರಾಯ ಮಂಡಿಸಬೇಕಾಗಿ ಅತೀವ ಕಾಳಜಿಯಿಂದ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

