ಮಂಗಳೂರು : ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ನಡಾವಳಿ ಉತ್ಸವ ಇದೇ ಬರುವ ಎಪ್ರಿಲ್ 3 ರಿಂದ 5 ರವರೆಗೆ ಶ್ರೀಕ್ಷೇತ್ರದಲ್ಲಿ ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮತ್ತು ಶ್ರೀ ಭಗವನ್ನಾಮ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜ್ರಂಭಣೆಯಿಂದ ಜರಗಲಿರುವುದು.
ದಿನಾಂಕ 2 ರಂದು ಶ್ರೀಕ್ಷೇತ್ರದ ತಂತ್ರಿವರೇಣ್ಯರಾದ ಕುಂಟಾರು ಶ್ರೀ ರವೀಶ ತಂತ್ರಿಗಳ ನೇತ್ರತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಶುದ್ಧ ಕಲಶ, ಗಣಹೋಮ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ ನಡೆಯಲಿದೆ, ಸಂಜೆ 6 ಗಂಟೆಗೆ ಕೊಡಿಯಾಲ್ಬೈಲ್ ಕೆಳಗಿನ ಮನೆ ತರವಾಡಿನಿಂದ ಶ್ರೀ ತೊಂಡಚ್ಚಮಾರರ ಭಂಡಾರದ ಶೋಭಾಯಾತ್ರೆ ಶ್ರೀ ಕ್ಷೇತ್ರಕ್ಕೆ ಆಗಮನ, ರಾತ್ರಿ 7:30ಕ್ಕೆ ಮಹಾಪೂಜೆ ಜರಗಲಿದೆ.

ದಿನಾಂಕ 3 ರಂದು ನಡಾವಳಿ ಉತ್ಸವ ಪ್ರಾರಂಭ ,ಬೆಳಿಗ್ಗೆ 9:45 ಕ್ಕೆ ಭಂಡಾರ ಆರೋಹಣ, ಭಂಡಾರ ಮಂದಿರದಿಂದ ಶ್ರೀ ಮಾತೆಯರ ಪವಿತ್ರ ಭಂಡಾರ ಉತ್ಸವ ಕ್ಷೇತ್ರಗಳಿಗೆ ಆಗಮಿಸುವುದು. ಮಧ್ಯಾಹ್ನ 12:30ಕ್ಕೆ ಶ್ರೀ ಚೀರುಂಭ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿರುವುದು.ರಾತ್ರಿ 10 ರಿಂದ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಬಲಿ ಉತ್ಸವ, ಮೂರ್ತಿ ದರ್ಶನ ನಂತರ ಪ್ರಸಾದ ವಿತರಣೆ ನಡೆಯಲಿದೆ.
ದಿನಾಂಕ 4ರಂದು ಮಧ್ಯಾಹ್ನ 12:30 ಕ್ಕೆ ಶ್ರೀ ಪಾಡಾಂಗರ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ 10 ರಿಂದ ಭೇಟಿಕಳ, ನಂತರ ರಾತ್ರಿ 1:30 ಕ್ಕೆ ಶ್ರೀ ಭಗವತೀ ಮಾತೆಯರ ಭವ್ಯ ಶೋಭಾಯಾತ್ರೆ ,ಪ್ರಾಥಃಕಾಲ 2:30 ಕ್ಕೆ ಕೆಂಡಸೇವೆ, ಮೂರ್ತಿದರ್ಶನ, ಪ್ರಸಾದ ವಿತರಣೆ ನಡೆಯಲಿರುವುದು.

ದಿನಾಂಕ 5ರಂದು ಮಧ್ಯಾಹ್ನ 12:30ಕ್ಕೆ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ಬಳಿಕ ಅನ್ನಸಂಪರ್ಪಣೆ ನಡೆಯಲಿರುವುದು. ರಾತ್ರಿ 10ಕ್ಕೆ ಶ್ರೀ ಪುಲ್ಲೂರಾಳಿ ಭಗವತೀ ಕ್ಷೇತ್ರದಲ್ಲಿ ಕೆಂಡಸೇವೆ, ಮೂರ್ತಿ ದರ್ಶನ, ಪ್ರಸಾದ ವಿತರಣೆ ಬಳಿಕ ಭಂಡಾರ ಅವರೋಹಣ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮದಲ್ಲಿ ಭಗವದ್ಭಕ್ತರಾದ ತಾವೆಲ್ಲರೂ ಸಕುಟುಂಬಿಕರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಉತ್ಸವವಾದಿ ಪುಣ್ಯ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತ್ರಿಕರಣಪೂರ್ವಕವಾಗಿ ಸಹಕರಿಸಿ, ಪೂಜಾ ಸೇವಾದಿಗಳನ್ನು ಸಮರ್ಪಿಸಿ ಸರ್ವಮಂಗಲೆ ಶ್ರೀ ಭಗವತೀ ಮಾತೆಯರ, ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಪರಿವಾರ ದೈವ ದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಕ್ಷೇತ್ರದ ಮೊಕ್ತೇಸರರಾದ ರವೀಂದ್ರ. ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


