ಉಡುಪಿ : ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದ ಯಕ್ಷಗಾನ ಸೇವೆಯ ಮಹಿಷಾಸುರನ ಪಾತ್ರಧಾರಿ ತೋರಿದ ಅತಿರೇಕದ ಆವೇಶ ಈಗ ವಿವಾದಕ್ಕೆ ಕಾರಣವಾಗಿದೆ.
ರಂಗಸ್ಥಳದಲ್ಲಿ ಅಬ್ಬರಿಸುವ ವೇಳೆ ಪಾತ್ರಧಾರಿ ರಂಗಮಂಟಪದ ಕಂಬಕ್ಕೆ ಜೋರಾಗಿ ತಲೆಯನ್ನು ಗುದ್ದಿದ್ದು, ಈ ದೃಶ್ಯವನ್ನು ಕಂಡು ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಪರ- ವಿರೋಧ ಚರ್ಚೆ ಶುರುವಾಗಿದೆ.
ಕೆಲವರು ಇದು ಪಾತ್ರಕ್ಕೆ ಜೀವ ತುಂಬುವ ಕಲೆ ಎಂದರೆ, ಇನ್ನು ಕೆಲವರು ಇದು ಕಲೆಗೆ ನೀಡುವ ಗೌರವವಲ್ಲ. ಕಲಾವಿದರ ಇಂತಹ ವರ್ತನೆ ಮಿತಿ ಮೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

