ಮಂಜೇಶ್ವರ : ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು ಕೇರಳ ವಿಧಾನ ಸಭಾ ಚುನಾವಣಾ ಪ್ರಯುಕ್ತ ನಾಳೆ ವರ್ಕಾಡಿಗೆ ಆಗಮಿಸಲಿದ್ದಾರೆ.
ಯುಡಿಎಫ್ ಅಭ್ಯರ್ಥಿ ಎಕೆಎಂ.ಅಶ್ರಫ್ ರವರ ಪರ ಚುನಾವಣಾ ಪ್ರಚಾರ ಸಭೆ ಏಪ್ರಿಲ್ 5 ರಂದು ಸಾಯಂಕಾಲ 4:00ಗೆ ವರ್ಕಾಡಿ ಮಜೀರ್ ಪಳ್ಳದಲ್ಲಿ ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಸ್ತುತ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಯುಡಿಎಫ್ ನ ರಾಜ್ಯಮಟ್ಟದ ನೇತಾರರು ಭಾಗವಹಿಸಲಿದ್ದು, ಮುಖ್ಯಮಂತ್ರಿ ಆಗಮನದ ನಿರೀಕ್ಷೆಯಲ್ಲಿ ವಿಶೇಷ ಭದ್ರತೆಗಳನ್ನು ಕೈಗೊಳ್ಳಲಾಗಿದೆ

