ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಇರಾನ್ನಲ್ಲಿ ಸಿಲುಕಿದ್ದ 345 ಭಾರತೀಯ ಮೀನುಗಾರರು ಶನಿವಾರ ಅರ್ಮೇನಿಯಾ ಮೂಲಕ ಚೆನ್ನೈಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಹೆಚ್ಚಿನ ಮೀನುಗಾರರು ತಮಿಳುನಾಡಿನವರಾಗಿದ್ದ ಕಾರಣ, ಅರ್ಮೇನಿಯಾದ ವಿಮಾನವು ಚೆನ್ನೈನಲ್ಲಿ ಇಳಿಯಿತು.

ಪ್ರಸ್ತುತ 1,000 ಕ್ಕೂ ಹೆಚ್ಚು ಭಾರತೀಯ ಮೀನುಗಾರರು ಇರಾನ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅವರಲ್ಲಿ ಹಲವರು ಇರಾನ್ನ ದಕ್ಷಿಣ ಭಾಗದ ಕರಾವಳಿ ಪ್ರದೇಶಗಳಲ್ಲಿದ್ದಾರೆ. ಈ ಬ್ಯಾಚ್ ದಕ್ಷಿಣ ಇರಾನ್ನಿಂದ ಅದರ ಉತ್ತರದ ಗಡಿಗೆ ಸ್ಥಳಾಂತರಿಸಲ್ಪಟ್ಟ ಮೊದಲನೆಯದು, ಅಲ್ಲಿಂದ ಅವರು ಭಾರತೀಯ ಅಧಿಕಾರಿಗಳ ಸಹಾಯದಿಂದ ಅರ್ಮೇನಿಯಾವನ್ನು ದಾಟಿದರು.

ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಸಹಾಯ ಮಾಡಿದ್ದಕ್ಕಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅರ್ಮೇನಿಯನ್ ವಿದೇಶಾಂಗ ಸಚಿವ ಅರಾರತ್ ಮಿರ್ಜೋಯನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇರಾನ್ನಲ್ಲಿ ಸಿಲುಕಿರುವ ಭಾರತೀಯ ಮೀನುಗಾರರ ಗುಂಪು ಇರಾನ್ ನಿಂದ ಅರ್ಮೇನಿಯಾ ತಲುಪಲು ಸುಮಾರು 20 ಗಂಟೆಗಳ ಕಾಲ ಪ್ರಯಾಣಿಸಬೇಕಾಯಿತು” ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು.

ಇರಾನ್- ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ 1,500 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ನ ಭೂ ಗಡಿಗಳ ಮೂಲಕ ಇರಾನ್ನಿಂದ ತಾಯ್ನಾಡಿಗೆ ಮರಳಿದ್ದಾರೆ.

