ಕಾಸರಗೋಡು : ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ವಾಣಿಯಂಪಾರೆ ಸನಿಹದ ಇತಿಹಾಸ ಪ್ರಸಿದ್ದ ಉದಯಗಿರಿ ಶ್ರೀ ಮಹಾ ಕಾಳಿ ದೇವಾಲಯದಲ್ಲಿ ಸಪ್ತ ದಿನಗಳ ಭಜನಾ ಪ್ರದಕ್ಷಿಣೆ ಮತ್ತು ಪ್ರತಿಷ್ಠಾ ಮಹೋತ್ಸವ ಭಕ್ತಿ ಭಾವದಿಂದ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಮಹಾಕಾಳಿ ಕ್ಷೇತ್ರಕ್ಕೆ ಕೋಟೆಯಾರ್ ಸಮಾಜದ ಯುವಕ ಸಮಿತಿಯ ಕೊಡುಗೆಯಾದ ನೂತನ ಮುಖ್ಯದ್ವಾರದ ಲೋಕಾರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

