ಧಾರವಾಡ : ತಾಲೂಕಿನ ಅಮ್ಮಿನಬಾವಿ ಗ್ರಾಮದ ಜೈನ್ ಸಮಾಜದ ಗಡೇಕಾರ ಮನೆತನವು ಪ್ರತಿ ವರ್ಷ ದವನದ ಹುಣ್ಣಿಮೆಯ ನಂತರದ ದಿನಗಳಲ್ಲಿ ಅಮ್ಮಿನಬಾವಿಯಿಂದ ಯಲ್ಲಮ್ಮನ ಗುಡ್ಡದವರಿಗೆ ಎತ್ತಿನ ಬಂಡೆ ಮುಖಾಂತರ ಶ್ರೀರೇಣುಕಾಮಾತೆಯ ದರ್ಶನಾಶೀರ್ವಾದಕ್ಕಾಗಿ ಪಾದಯಾತ್ರೆ ಕೈಗೊಳ್ಳುತ್ತಾರೆ.
ಈ ಪಾದಯಾತ್ರೆಯಲ್ಲಿ ನೂರಾರು ಜನ ಸದ್ಭಕ್ತರು ಭಾಗವಸುತ್ತಾರೆ. ಇದು ಜೈನ್ ಸಮಾಜದ ಗಡೇಕಾರ ಮನೆತನದಿಂದ ಕಳೆದ ಎಷ್ಟೋ ತೆಲೆಮಾರಿನಿಂದ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಅಮ್ಮಿನಬಾವಿ ಗ್ರಾಮದ ಗಡೇಕಾರ ಮನೆತನವು ಈ ಪಾದಯಾತ್ರೆಯ ವೆಚ್ಚ ಭರಿಸಲು ತಮ್ಮ ಮನೆತನದ ಜಮೀನುಗಳಲ್ಲಿ 4 ಎಕರೆ ಜಮೀನಿನ ಇಳುವರಿಯ ಸಂಪೂರ್ಣ ಆದಾಯವನ್ನು ಈ ಮೀಸಲಿಡುತ್ತಿರುವುದು ಇಲ್ಲಿಯ ವಿಶೇಷ.

ಸೋಮವಾರ ಸಂಜೆ ಆರಂಭಗೊಂಡ ಈ ಪಾದಯಾತ್ರೆಯಲ್ಲಿ ಜೈನ್ ಸಮಾಜ ಟ್ರಸ್ಟ ಅಧ್ಯಕ್ಷ ಟಿ. ಎಂ. ದೇಸಾಯಿ, ಈಶ್ವರ ಗಡೇಕಾರ, ನೇಮಿಚಂದ್ರ ನವಲೂರ, ಸಮ್ಮೇದ್ ಲೋಕುರ, ಬಸಪ್ಪ ಅಣ್ಣಿಗೇರಿ, ಈಶ್ವರ ಶಿಂತ್ರಿ, ಶಾಂತಿನಾಥ ಲೋಕೂರ, ಕಲ್ಲಪ್ಪ ಕುರುಬಗಟ್ಟಿ, ಪ್ರಕಾಶ ಪೂಜಾರ, ಮಂಜುನಾಥ ಹಣಿ, ದೇವೇಂದ್ರ ರಾಘೂನವರ, ಈರಪ್ಪ ಕರಡಿಗುಡ್ಡ, ಮಂಜುನಾಥ ಬೊಬ್ಬಕ್ಕನವರ, ಜಿನ್ನಪ್ಪ ಗಡೇಕಾರ, ಮಂಜುನಾಥ ಧಾರವಾಡ, ಬಸವಂತಪ್ಪ ಧೋಂಡೀಬಾರ, ಆನಂದ ಗಡೇಕಾರ, ಭೀಮಪ್ಪ ಜಗಾಪೂರ, ಶೀತಲ ನವಲೂರ, ಪ್ರಸನ್ನ ದೇಸಾಯಿ, ಶಿವಪ್ಪ ಹಾರಿಬೀಡಿ, ಶೀತಲ ಧಾರವಾಡ, ನಾಗೇಶ ಪತ್ತಾರ, ದೇವೇಂದ್ರಪ್ಪ ಕುಟ್ಟಳವಾಡಿ ಸೇರಿ ಗಡೇಕಾರ ಮನೆತನದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಯಲ್ಲಮ್ಮನಗುಡ್ಡದಲ್ಲಿ 3 ದಿನಗಳ ಕಾಲ ವಾಸ್ತವ್ಯದಲ್ಲಿರುವ ಈ ಪಾದಯಾತ್ರೆಯ ಭಕ್ತರು ವಿವಿಧ ಸೇವೆಗಳನ್ನು ಶ್ರೀಮಾತೆಯ ಸನ್ನಿಧಾನಕ್ಕೆ ಸಲ್ಲಿಸುವರು. ಭಜನಾ ಕಾರ್ಯಕ್ರಮ ನಡೆಸುವರು.

