ಮಂಗಳೂರು: ಸ್ಟ್ಯಾಂಡರ್ಡ್ ಚಾರ್ಟೆಡ್ ಆಂಡ್ ಎಸೆಕ್ಟ್ ಸಹಯೋಗದಲ್ಲಿ ನೇಮಕಾತಿ ಸಂಬಂಧೀ ಕೌಶಲ ತರಬೇತಿ ಕಾರ್ಯಕ್ರಮ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚಿಗೆ ಜರಗಿತು.
ವಿದ್ಯಾರ್ಥಿಗಳನ್ನು ಉದ್ಯಮ ಉಪಯುಕ್ತರನ್ನಾಗಿಸುವ , ಭವಿಷ್ಯದ ಕೌಶಲಗಳೊಂದಿಗೆ ಸ್ನೇಹಿಯನ್ನಾಗಿಸುವ ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಡಾಟಾ ಎನಾಲಿಟಿಕ್ಸ್ ಗಳ ತರಬೇತಿ ಮತ್ತು ಉದ್ಯೋಗ ಮತ್ತು ಉದ್ಯಮಶಿಲತೆಗೆ ಹಾದಿಯನ್ನು ಸೃಷ್ಟಿಸುವ ಉದ್ದೇಶದಿಂದ ಈ ತರಬೇತಿ ನಡೆದಿದೆ.
ಕಾರ್ಯಕ್ರಮದಲ್ಲಿ ಸ್ಟ್ಯಾಂಡರ್ಡ್ ಚಾರ್ಟೆಡ್ ಜಿಬಿಎಸ್ ಇಂಡಿಯಾದ ಸಸ್ಟೇನೇಬಿಲಿಟಿಯ ಎವಿಪಿ ಪಿನಾಕಿ ಶ್ರೀಮಣಿ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರವಿಂದ ಚತುರ್ವೇದಿ, ದಕ್ಷಿಣ ವಲಯ ಮುಖ್ಯಸ್ಥ ರಜತ್ ಚತುರ್ವೇದಿ ಪಾಲ್ಗೊಂಡರು. ಸಾಂಪ್ರದಾಯಿಕ ಶಿಕ್ಷಣದ ಎಲ್ಲೆ ಮೀರಿ ಫಿಜಿಟಲ್ ಮಾದರಿಯನ್ನು ಪರಿಣಾಮಕಾರಿಯಾಗಿ ಬೆಳೆಸುವ ಕುರಿತು ಅವರು ವಿವರಿಸಿದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಸೆಂಟ್ ವ್ಯವಸ್ಥಾಪಕ ಮಂಡಳಿ ಸದಸ್ಯ ಸತೀಶ್ ಕುಮಾರ್ ಭಟ್, ಬೆಸೆಂಟ್ ಮಹಿಳಾ ಕಾಲೇಜು ಪ್ರಾಚಾರ್ಯ ಡಾ. ಪ್ರವೀಣ್ ಕೆ.ಸಿ., ಕೆನರಾ ಇಂಜಿನಿಯರಿಂಗ್ ಕಾಲೇಜಿನ ತರಬೇತಿ, ನೇಮಕಾತಿ ಡೀನ್ ಎಚ್. ಮನೋಜ್ ಟಿ. ಗಡಿಯಾರ್, ಹಾಗೂ ತರಬೇತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ. ದೀಪ್ತಿ ದಿನೇಶ್ ಪ್ರಭು, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಗಣ್ಯರು ಭಾಗವಹಿಸಿದರು.

